ಗದಗ:ವಿದ್ಯುತ್ ಸಂಪರ್ಕ ಕಲ್ಪಿಸಲು ಲಂಚ ಪಡೆಯುತ್ತಿದ್ದ ವಿದ್ಯುತ್ ಗುತ್ತಿಗೆದಾರನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ನಡೆದಿದೆ.
ಲಂಚಕ್ಕೆ ಬೇಡಿಕೆ: ರೆಡ್ಹ್ಯಾಂಡ್ ಆಗಿ ಎಸಿಬಿ ಬಲೆಗೆ ವಿದ್ಯುತ್ ಗುತ್ತಿಗೆದಾರ! - ಗದಗದಲ್ಲಿ ವಿದ್ಯುತ್ ಗುತ್ತಿಗೆದಾರ ನಿಂದ ಲಂಚ ಸುದ್ದಿ
ವಿದ್ಯುತ್ ಸಂಪರ್ಕ ಕಲ್ಪಿಸಲು ಹಣದ ಬೇಡಿಕೆ ಇಟ್ಟ ಆರೋಪದ ಮೇಲೆ ವಿದ್ಯುತ್ ಗುತ್ತಿಗೆದಾರ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗದಗ ಜಿಲ್ಲೆ ಹೆಸ್ಕಾಂ ಕಚೇರಿಯಲ್ಲಿ ನಡೆದಿದೆ.
![ಲಂಚಕ್ಕೆ ಬೇಡಿಕೆ: ರೆಡ್ಹ್ಯಾಂಡ್ ಆಗಿ ಎಸಿಬಿ ಬಲೆಗೆ ವಿದ್ಯುತ್ ಗುತ್ತಿಗೆದಾರ! gadag acb raid on hescom](https://etvbharatimages.akamaized.net/etvbharat/prod-images/768-512-5832111-thumbnail-3x2-new.jpg)
ವಿದ್ಯುತ್ ಗುತ್ತಿಗೆದಾರ ಹನಮಂತಪ್ಪ ಹೊನ್ನಳ್ಳಿ ಎಂಬಾತ 7 ಸಾವಿರ ಹಣ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಾಕೊಂಡಿದ್ದಾನೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದ ಲಕ್ಷ್ಮವ್ವ ಪೂಜಾರ ಎನ್ನುವವರ ಆಶ್ರಯ ಮನೆಗೆ ಒಂದು ವಿದ್ಯುತ್ ಕಂಬ್ ಹಾಕಿ ಮೀಟರ್ ಅಳವಡಿಸಲು 12 ಸಾವಿರ ಬೇಡಿಕೆ ಇಟ್ಟಿದ್ದನಂತೆ. ಗುತ್ತಿಗೆದಾರ ಹನುಮಂತಪ್ಪ ಇನ್ನು ಲಕ್ಷ್ಮವ್ವ ಪೂಜಾರಿ ಸಂಬಂಧಿ ಮತ್ತಪ್ಪ ಹಿರೇಹಾಳ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು, ಈ ಮೇರೆಗೆ 7 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಾಕಿಕೊಂಡಿದ್ದಾನೆ.
ಎಸಿಬಿ ಡಿವೈಎಸ್ಪಿ ವಾಸುದೇವ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಗುದ್ದಿಗೊಪ್ಪ ಜಂಟಿಯಾಗಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ಗುತ್ತಿಗೆದಾರ ಹನುಮಂತಪ್ಪ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ.