ಕರ್ನಾಟಕ

karnataka

ETV Bharat / state

ಗದಗದ 75 ವರ್ಷದ ನಿವೃತ್ತ ಹೆಲ್ತ್ ಇನ್ಸ್​ಪೆಕ್ಟರ್​ಗೆ ಕೊರೊನಾ: ಸೋಂಕಿನ ಮೂಲ ನಿಗೂಢ! - ಗದಗ ಜಿಲ್ಲೆಯಲ್ಲಿ ಕೊರೊನಾ ಎಫೆಕ್ಟ್

ಗದಗ ಜಿಲ್ಲೆಯಲ್ಲಿ 5ನೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸ್ವಯಂ ಪ್ರೇರಿತವಾಗಿ ಕೊರೊನಾ ಟೆಸ್ಟಿಂಗ್​ ಮಾಡಿಸಿಕೊಂಡ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢವಾಗಿದೆ.

sddd
ಗದಗದ 75 ವರ್ಷದ ನಿವೃತ್ತ ಹೆಲ್ತ್ ಇನ್ಸ್​ಪೆಕ್ಟರ್​ಗೆ ಕೊರೊನಾ ಪತ್ತೆ

By

Published : Apr 28, 2020, 4:30 PM IST

ಗದಗ: ಇಂದು ಜಿಲ್ಲೆಯಲ್ಲಿ 5ನೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸ್ವಯಂ ಪ್ರೇರಿತವಾಗಿ ಕೊರೊನಾ ಟೆಸ್ಟಿಂಗ್​ ಮಾಡಿಸಿಕೊಂಡ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢವಾಗಿದೆ.

ಹೌದು, ನಗರದ ಗಂಜಿ ಬಸವೇಶ್ವರ ನಿವಾಸಿಯಾದ P- 514, 75 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢವಾಗಿದೆ. ಇವರು ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಇನ್ಸ್​ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ರು. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೆ ಕೊರೊನಾ ದೃಢವಾಗಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ತೀವ್ರ ಉಸಿರಾಟದ ತೊಂದರೆಯಿಂದಾಗಿ ವೃದ್ಧನ ಮಕ್ಕಳು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆಗ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ.

ವೃದ್ಧನ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಗಳು ಸೇರಿದಂತೆ 8 ಜನರ ವರದಿ ನೆಗೆಟಿವ್ ಬಂದಿದೆ. ಇನ್ನು ಪ್ರಥಮ ಸಂಪರ್ಕದಲ್ಲಿ 24 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. 75 ವರ್ಷದ ವೃದ್ಧ ಮನೆಯಿಂದ ಹೊರಗಡೆ ಹೋಗಿಲ್ಲ. ಆದರೆ ವೃದ್ಧನ ಮಗಳು ಬೆಟಗೇರಿಯಿಂದ ಗಂಜಿ ಬಸವೇಶ್ವರ ನಗರಕ್ಕೆ ಮಾತ್ರ ಬಂದಿದ್ದನ್ನು ಬಿಟ್ಟರೆ ಮನೆಯ ಸದಸ್ಯರು ಎಲ್ಲಿಯೂ ಹೋಗಿರಲಿಲ್ಲ. ಹಾಗಾಗಿ ವೃದ್ಧನಿಗೆ ಕೊರೊನಾ ಸೋಂಕು ಹೇಗೆ ತಗುಲಿತು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿ ಕೊರೊನಾ ಮೂಲವನ್ನು ಪತ್ತೆ ಮಾಡಲು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಯಾರಿಗಾದರೂ ಕೊರೊನಾ ಲಕ್ಷಣಗಳು ಕಂಡು ಬಂದರೆ ಸ್ವಯಂ ಪ್ರೇರಿತವಾಗಿ ಬಂದು ಚೆಕ್​ ಮಾಡಿಸಿಕೊಳ್ಳಿ ಎಂದಿದ್ದಾರೆ.

ABOUT THE AUTHOR

...view details