ಕರ್ನಾಟಕ

karnataka

ETV Bharat / state

ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದ ಗದಗದ 3 ವರ್ಷದ ಪೋರ - ಗದಗ

ಈ ಬಾಲಕ, 13 ಬಣ್ಣಗಳು, 13 ಪಕ್ಷಿಗಳು, 12 ಹೂವುಗಳು, 10 ಸಾಕು ಪ್ರಾಣಿಗಳು, 18 ದೇಹದ ಭಾಗಗಳು, 20 ಹಣ್ಣುಗಳು, 8 ಕೀಟಗಳು, 8 ಜನ ನಮ್ಮ ಸಹಾಯಕರುಗಳು, 9 ಸಮುದ್ರದ ಪ್ರಾಣಿಗಳು, ಕನ್ನಡ ವರ್ಣಮಾಲೆ, 16 ಆಕೃತಿಗಳು, 7 ಆಹಾರ ಪದಾರ್ಥಗಳು, 19 ತರಕಾರಿಗಳು, ಇಂಗ್ಲಿಷ್ ಅಲ್ಫಾಬೆಟ್ಸ್, ಸಂಖ್ಯೆಗಳು, ಹಿಂದೂ ಪಂಚಾಂಗದ ಪ್ರಕಾರ ಎಲ್ಲಾ ತಿಂಗಳುಗಳು, 21 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ.

gadag
ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದ ಶ್ರೀಹರ್ಷ ಕುಲಕರ್ಣಿ

By

Published : Jun 30, 2021, 7:51 AM IST

Updated : Jun 30, 2021, 1:02 PM IST

ಗದಗ: ಮುದ್ದು ಮುದ್ದಾಗಿ ಮಾತನಾಡುವ ಇಲ್ಲೊಬ್ಬ ಬಾಲಕ ಸಾಮಾನ್ಯ ಪ್ರತಿಭೆಯಲ್ಲ. ಅಗಾಧ ನೆನಪಿನ ಶಕ್ತಿ ಈತನಲ್ಲಿದೆ. ಇತ್ತೀಚೆಗೆ ಈತನ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದೆ.

ಈ ಪುಟಾಣಿಗಿನ್ನೂ ಕೂಡ ಸರಿಯಾಗಿ ಓಡಾಡೋಕ್ಕೆ ಬರಲ್ಲ. ಶಾಲೆಗೆ ಹೋಗುವ ವಯಸ್ಸೂ ಆಗಿಲ್ಲ. ಆದ್ರೆ ಕೇಳಿದ ಪ್ರಶ್ನೆಗಳಿಗೆಲ್ಲ ಪಟಪಟ ಅಂತ ಉತ್ತರ ಕೊಡಬಲ್ಲ. ಅಂದಹಾಗೆ ಬಾಲಕನ ಹೆಸರು ಶ್ರೀಹರ್ಷ ಕುಲಕರ್ಣಿ. ಗದಗದ ರಾಜೀವ್​ ಗಾಂಧಿ ನಗರದ ನಿವಾಸಿಗಳಾದ ಪ್ರಮೋದ ಕುಲಕರ್ಣಿ ಹಾಗೂ ಪಲ್ಲವಿ ಕುಲಕರ್ಣಿ ದಂಪತಿಯ ಪುತ್ರ.

ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಸೇರಿದ ಪೋರನ ಸಾಧನೆ

ಈತನಿಗೀಗ ಮೂರು ವರ್ಷ. ಅಂದ್ಮೇಲೆ, ಇ‌ನ್ನೂ ಶಾಲೆ ಸೇರುವ ವಯಸ್ಸಂತೂ ಖಂಡಿತಾ ಆಗಿಲ್ಲ. ಆದ್ರೆ ನರ್ಸರಿ‌ ಸ್ಕೂಲ್, ಯುಕೆಜಿ-ಎಲ್‌ಕೆಜಿಯಲ್ಲಿ ಏನೆಲ್ಲ ಕಲಿಯಬೇಕೋ ಅವೆಲ್ಲವನ್ನೂ ಈತ ಈಗಲೇ ಕಲಿತು ಮುಗಿಸಿದ್ದಾನೆ. ಯಾಕಂದ್ರೆ, ಈತನ ವಯಸ್ಸಿನ ಮಕ್ಕಳಿಗೆ ಹೋಲಿಸಿದರೆ ಈ ಹುಡುಗ ಕೊಂಚ ವಿಭಿನ್ನ.

ಏಪ್ರಿಲ್ 12, 2021 ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನವರು ಆನ್​​ಲೈನ್​ನಲ್ಲಿ ನಡೆಸಿದ ಟ್ಯಾಲೆಂಟ್ ಸರ್ಚ್ ಕಾರ್ಯಕ್ರಮದಲ್ಲಿ ಶ್ರೀಹರ್ಷ ಕುಲಕರ್ಣಿ ಕೂಡ ಭಾಗವಹಿಸಿದ್ದ. ಈ ವೇಳೆ ತೋರಿದ ಪ್ರತಿಭೆಯನ್ನು ಕಂಡು, ಅಗಾಧ ನೆನಪಿನ ಶಕ್ತಿ ಮೆಚ್ಚಿ ಸಂಸ್ಥೆಯವರು ಪ್ರೋತ್ಸಾಹದ ರೂಪದಲ್ಲಿ ಮೇ 21ರ 2021 ರಂದು, ಅಪ್ರಿಸಿಯೇಶನ್ ಸರ್ಟಿಫಿಕೇಟ್, ಮೆಡಲ್ ಕಳಿಸುವುದರ ಜೊತೆಗೆ ತಮ್ಮ ರೆಕಾರ್ಡ್ ಬುಕ್​​ನಲ್ಲಿ ಈತನ ಹೆಸರನ್ನೂ ಸೇರಿಸಿಕೊಂಡಿದ್ದಾರೆ.

ಸಹೋದರಿಯೇ ಪ್ರೇರಣೆ:

ಇದಕ್ಕೆಲ್ಲ ಕಾರಣ ಈತನ ಸಹೋದರಿ ಶ್ರೀರಕ್ಷಾ. ಶ್ರೀರಕ್ಷಾ ಸದ್ಯ ಯುಕೆಜಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಇವಳಿಗೆ‌ ಹೇಳುವ ಮನೆ ಪಾಠವೇ ಈ ಪೋರನಿಗೆ ಸ್ಪೂರ್ತಿಯಾಗಿದೆ. ಇವಳಿಗೆ ಹೇಳುವ ಪಾಠವನ್ನೆಲ್ಲ ಶ್ರೀಹರ್ಷ ಲಕ್ಷಗೊಟ್ಟು ಕೇಳುತ್ತಾನಂತೆ. ಒಮ್ಮೆ ಹೀಗೆ ಗಮನವಿಟ್ಟು ಕೇಳಿದ ಪಾಠವನ್ನ ಈತನ ಸಹೋದರಿ ಶ್ರೀರಕ್ಷಾ ಹೇಳ್ತಾಳೋ ಗೊತ್ತಿಲ್ಲ. ಆದ್ರೆ ಪುಟಾಣಿ ಶ್ರೀಹರ್ಷ ಅಂತು ತಪ್ಪದೆ ಹೇಳೋಕೆ ಸಿದ್ಧವಾಗಿ ನಿಂತಿರ್ತಾನೆ.

ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಪ್ರಶಸ್ತಿ

ಶ್ರೀಹರ್ಷನ ತಂದೆ ವೃತ್ತಿಯಲ್ಲಿ ಸರ್ಕಾರಿ ನೌಕರರು. ತಾಯಿ ಮನೆಯಲ್ಲೇ ಇರೋದ್ರಿಂದ ಮಕ್ಕಳಿಗೆ ಶಾಲೆಯಷ್ಟೇ ಪರಿಪೂರ್ಣವಾಗಿ ಶಿಕ್ಷಣ‌‌ ನೀಡ್ತಿದ್ದಾರೆ. ಮಗಳಿಗೆ ನೀಡಿದ ಶಿಕ್ಷಣ ಪುಟಾಣಿ ಪೋರನಿಗೆ ವರದಾನವಾಗಿದೆ. ಇಂಗ್ಲೀಷ್, ಗಣಿತ, ವಿಜ್ಞಾನ ಈ ಮೂರು ವಿಷಯಗಳ ಗುರುತಿಸುವಿಕೆಯಲ್ಲಿ ಶ್ರೀಹರ್ಷ ಪ್ರಾವಿಣ್ಯತೆ ಹೊಂದಿದ್ದಾನೆ.

13 ಬಣ್ಣಗಳು, 13 ಪಕ್ಷಿಗಳು, 12 ಹೂವುಗಳು, 10 ಸಾಕು ಪ್ರಾಣಿಗಳು, 18 ದೇಹದ ಭಾಗಗಳು, 20 ಹಣ್ಣುಗಳು, 8 ಕೀಟಗಳು, 8 ಜನ ನಮ್ಮ ಸಹಾಯಕರುಗಳು, 9 ಸಮುದ್ರದ ಪ್ರಾಣಿಗಳು, ಕನ್ನಡ ವರ್ಣಮಾಲೆ, 16 ಆಕೃತಿಗಳು, 7 ಆಹಾರ ಪದಾರ್ಥಗಳು, 19 ತರಕಾರಿಗಳು, ಇಂಗ್ಲಿಷ್ ಅಲ್ಫಾಬೆಟ್ಸ್, ಸಂಖ್ಯೆಗಳು, ಹಿಂದೂ ಪಂಚಾಂಗದ ಪ್ರಕಾರ ಎಲ್ಲಾ ತಿಂಗಳುಗಳು, 21 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರ ನೀಡುತ್ತಾನೆ.

ಇದನ್ನೂ ಓದಿ:'ಕೈ' ಬಲವರ್ಧನೆಗೆ ಡಿ.ಕೆ.ಶಿವಕುಮಾರ್ ಕಾರ್ಯತಂತ್ರ

Last Updated : Jun 30, 2021, 1:02 PM IST

ABOUT THE AUTHOR

...view details