ಗದಗ:ಜಿಲ್ಲೆಯಲ್ಲಿ ಹಲವೆಡೆ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಜನತಾ ಕಾಲೋನಿ ಜಲಾವೃತಗೊಂಡಿದೆ.
ಗದಗದಲ್ಲಿ ಭಾರೀ ಮಳೆ: ಜಲಾವೃತಗೊಂಡ ಜನತಾ ಕಾಲೋನಿ - gadga rain
ಜಿಲ್ಲೆಯಲ್ಲಿ ಹಲವೆಡೆ ಬುಧವಾರ ರಾತ್ರಿ ಮಳೆ ಸುರಿದಿದ್ದು, ರೋಣ ತಾಲೂಕಿನ ಬೆಳವಣಕಿ ಗ್ರಾಮದ ಜನತಾ ಕಾಲೋನಿಯಲ್ಲಿನ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜನ ಪರದಾಡುವಂತಾಗಿದೆ.
![ಗದಗದಲ್ಲಿ ಭಾರೀ ಮಳೆ: ಜಲಾವೃತಗೊಂಡ ಜನತಾ ಕಾಲೋನಿ gadaga](https://etvbharatimages.akamaized.net/etvbharat/prod-images/768-512-7191397-962-7191397-1589442622130.jpg)
ಮನೆಗಳಿಗೆ ನುಗ್ಗಿದ ನೀರು
ಅವೈಜ್ಞಾನಿಕ ಕಾಮಗಾರಿಯಿಂದ ಮನೆಗಳಿಗೆ ಮಳೆ ನೀರು ನುಗ್ಗಿ ರಾತ್ರಿಯಿಡೀ ಜನ ಜಾಗರಣೆ ಮಾಡುವಂತಾಗಿದೆ. ಜೊತೆಗೆ ರೈತರ ಜಮೀನಿನ ನೀರು ಸಹ ಕಾಲೋನಿಗೆ ನುಗ್ಗಿದೆ. ಪರಿಣಾಮ ಮನೆಯಲ್ಲಿರುವ ಹಾಸಿಗೆ, ಹೊದಿಕೆ, ಆಹಾರ ಸಾಮಗ್ರಿಗಳು ಸಂಪೂರ್ಣ ನೀರಲ್ಲಿ ಮುಳುಗಿದ್ದು ಮಕ್ಕಳು, ಮಹಿಳೆಯರು ರಾತ್ರಿಯಿಡೀ ಪರದಾಡಿದರು.
ರೋಣ ತಾಲೂಕಿನ ಬೆಳವಣಕಿ ಗ್ರಾಮದ ಜನತಾ ಕಾಲೋನಿಯಲ್ಲಿನ ಮನೆಗಳಿಗೆ ನುಗ್ಗಿದ ನೀರು.
ಇದಕ್ಕೆಲ್ಲ ಜನತಾ ಕಾಲೋನಿಯ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎಂದು ಸ್ಥಳೀಯ ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.