ಗದಗ: ಜೂ.25 ರಿಂದ ಆರಂಭಗೊಳ್ಳಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿನ್ನೆಲೆ, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಗದಗ-ಬೆಟಗೇರಿ ನಗರದಲ್ಲಿ ವಿವಿಧ ಸ್ಥಳಗಳಿಂದ ಅವರ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಉಚಿತ ಅಟೋ ಸೇವೆಯ ವ್ಯವಸ್ಥೆ ಮಾಡಲಾಗಿದೆ ಎಂದು ಯಂಗ್ ಇಂಡಿಯಾ ಪರಿವಾರ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಹೇಳಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಯಂಗ್ ಇಂಡಿಯಾ ಅಟೋ ಸಂಘಟನೆಯಿಂದ ಉಚಿತ ಅಟೋ ಸೇವೆ - ವಿದ್ಯಾರ್ಥಿಗಳಿಗೆ ಉಚಿತ ಆಟೋ ಸೇವೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಅವರ ಪರೀಕ್ಷಾ ಕೇಂದ್ರಗಳಿಗೆ ತೆರಳಲು, ಉಚಿತ ಅಟೋ ಸೇವೆಯ ವ್ಯವಸ್ಥೆ ಮಾಡಲಾಗಿದೆ ಎಂದು ಯಂಗ್ ಇಂಡಿಯಾ ಪರಿವಾರ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವವರೆಗೂ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ತೆರಳಲು, ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಯಂಗ್ ಇಂಡಿಯಾ ಅಟೋ ಸಂಘಟನೆಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ, ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ, ಮುಳಗುಂದ ನಾಕಾ, ಮಹಾತ್ಮಾಗಾಂಧಿ ಸರ್ಕಲ್, ಹಾತಲಗೇರಿ ನಾಕಾ, ಬೆಟಗೇರಿ ಬಸ್ ನಿಲ್ದಾಣದಿಂದ ಯಂಗ್ ಇಂಡಿಯಾ ಸಂಘಟನೆ ವತಿಯಿಂದ ಬಿಳಿ ಬಣ್ಣದ ಧ್ವಜ ಕಟ್ಟಿಕೊಂಡು ಒಂದು ನೂರಕ್ಕೂ ಹೆಚ್ಚು ಅಟೋಗಳು ತೆರಳಲಿವೆ.