ಕರ್ನಾಟಕ

karnataka

ETV Bharat / state

ನರಗುಂದ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ - ಗದಗ ಅಪರಾಧ ಸುದ್ದಿ

ಗದಗ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ನರಗುಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Four accused arrested in Nargund, Four accused arrested in Nargund murder case, Nargund murder case update, Gadag crime news, Gadag district news, ನರಗುಂದದಲ್ಲಿ ನಾಲ್ವರು ಬಂಧನ, ನರಗುಂದ ಕೊಲೆ ಪ್ರಕರಣದಲ್ಲಿ ನಾಲ್ವರು ಬಂಧನ, ನರಗುಂದ ಕೊಲೆ ಪ್ರಕರಣ ಅಪ್​ಡೇಟ್​, ಗದಗ ಅಪರಾಧ ಸುದ್ದಿ, ಗದಗ ಜಿಲ್ಲಾ ಸುದ್ದಿ,
ನಾಲ್ವರು ಆರೋಪಿಗಳ ಬಂಧನ

By

Published : Jan 22, 2022, 8:43 AM IST

ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮೊನ್ನೆ ಎರಡು ಗುಂಪಗಳ ನಡುವೆ ಗಲಾಟೆ ನಡೆದಿತ್ತು. ಒಂದು ಕೋಮಿನ ಯುವಕರು ಸೋಮವಾರ ಮಾರಕಾಸ್ತ್ರ ಬಳಸಿ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆ ನಡೆಸಿರುವ ದೃಶ್ಯ

ನರಗುಂದ ಪಟ್ಟಣದ ಸಿದ್ದನಬಾವಿ ಓಣಿಯ ನಿವಾಸಿಗಳು ಹಾಗೂ ವಿದ್ಯಾರ್ಥಿಗಳು ಆಗಿರುವ ಮಲ್ಲಿಕಾರ್ಜುನ ಅಲಿಯಾಸ್ ಗುಂಡ್ಯಾ ಮುತ್ತಪ್ಪ ಹಿರೇಮಠ, ಚನ್ನಬಸಪ್ಪ ಅಲಿಯಾಸ್ ಚನ್ನಪ್ಪ ಚಂದ್ರಶೇಖರ ಅಕ್ಕಿ, ವಾಸವಿ ಕಲ್ಯಾಣ ಮಂಟಪ ಹತ್ತಿರದ ನಿವಾಸಿ ಕೂಲಿ ಕೆಲಸಗಾರ ಸಕ್ರಪ್ಪ ಹನಮಂತಪ್ಪ ಕಾಕನೂರ, ಸುಬೇದಾರ ಓಣಿಯ ಗುತ್ತಿಗೆದಾರ ಸಂಜು ಮಾರುತಿ ನಲವಡಿ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಓದಿ:ಅಮೆರಿಕ - ಕೆನಾಡ ಗಡಿ ದಾಟುವ ಬರದಲ್ಲಿ ರಕ್ತ ಹೆಪ್ಪುಗಟ್ಟಿ ಮಗು ಸೇರಿ ನಾಲ್ವರು ಭಾರತೀಯರ ಸಾವು!

ಸೋಮವಾರ ಸಂಜೆ ಪಟ್ಟಣದ ಪುರಸಭೆಯ ಹತ್ತಿರ ಪ್ರವೀಣ ಹಾಗೂ ಮಲ್ಲಿಕಾರ್ಜುನ ಹಿರೇಮಠ ಎಂಬ ಯುವಕರೊಟ್ಟಿಗೆ 7-8 ಜನರು ಸೇರಿ ಕಳೆದ ಎರಡು ತಿಂಗಳ ಹಿಂದಿನಿಂದ ನಡೆಯುತ್ತಿದ್ದ ಗಲಾಟೆಗೆ ಸಬಂಧಿಸಿದಂತೆ ಹಳೇ ದ್ವೇಷವಿಟ್ಟುಕೊಂಡು ಶಮೀರ್​ ಸುಬಾನಸಾಬ್​ ಶಹಪುರ ಹಾಗೂ ಶಮಸೀರಖಾನ್ ನಾಶೀರಖಾನ್​ ಪಠಾಣ್​ ಎಂಬುವವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶಮೀರ್ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ನಾಲ್ವರು ಆರೋಪಿಗಳ ಬಂಧನ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ನರಗುಂದ ಡಿಎಸ್‌ಪಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದು, ನಾಲ್ವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details