ಗದಗ: ಬಿಜೆಪಿ ಪಕ್ಷದ ಹಲವರಲ್ಲೆನೇ ಗುಂಪುಗಾರಿಕೆ ನಡೆದಿದೆ. ಸಂಪುಟ ವಿಸ್ತರಣೆ ಆಗುತ್ತೋ, ಬಿಡುತ್ತೋ ಅದರ ಬಗ್ಗೆ ಕಾಂಗ್ರೆಸ್ಗೆ ಗಮನವಿಲ್ಲ. ಜೊತೆಗೆ ಈ ಬಗ್ಗೆ ಕಾಂಗ್ರೆಸ್ ಪಕ್ಷದ ಆಸಕ್ತಿಯನ್ನು ಹೊಂದಿಲ್ಲ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೂರ್ಣ ಸರ್ಕಾರ ಆಗದೇ ಬಹಳ ದಿನಗಳಾಯ್ತು. ಜನ ತೊಂದರೆಗೆ ಒಳಗಾಗಿದ್ದಾರೆ. ಮಳೆ, ಬರ, ಪ್ರವಾಹದಿಂದ ತೊಂದರೆ ಆಯಿತು. ಆದರೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.