ಗದಗ: ರಾತ್ರೋರಾತ್ರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ರಚನೆ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಕಿಡಿಕಾರಿದ್ದಾರೆ.
ನಗರದಲ್ಲಿ ಈ ಕುರಿತು ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಆಶ್ಚರ್ಯಕರವಾದ ಬೆಳವಣಿಗೆ ಆಗಿದೆ. ಪ್ರಜಾಪ್ರಭುತ್ವದ ಬುಡವನ್ನೇ ಅಳಗಾಡಿಸೋ ರೀತಿಯಲ್ಲಿ ಇದೆ. ಎಲ್ಲಾ ದಿನಪತ್ರಿಕೆಗಳಲ್ಲಿ ಉದ್ಭವ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗ್ತಾರೆ ಅನ್ನೋ ಸುದ್ದಿಗಳು ಬಂದಿವೆ. ಆದರೆ ದಿಢೀರನೇ ಮುಂಜಾನೆ 7-30ಕ್ಕೆ ತರಾತುರಿಯಲ್ಲಿ ಬಿಜೆಪಿ ಮತ್ತು NCP ಜೊತೆಗೂಡಿ ಸರ್ಕಾರ ರಚನೆಯಾಗಿದೆ.