ಗದಗ: ನೆರೆ ಸಂತ್ರಸ್ತರಿಗೆ ನೀಡಬೇಕಾದ ಪ್ರವಾಹ ಪರಿಹಾರದ ಚೆಕ್ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಗದಗ ಜಿಲ್ಲೆಯ ರೋಣ ತಾಲೂಕಿನ ಯಾಸ ಹಡಗಲಿ ಗ್ರಾಮದಲ್ಲಿ ನೆರೆಸಂತ್ರಸ್ತರು ಪ್ರತಿಭಟನೆ ನಡೆಸಿದರು.
ಪರಿಹಾರ ವಿತರಣೆಯಲ್ಲಿ ಗೋಲ್‌ಮಾಲ್.. ಗದಗ್‌ನಲ್ಲಿ ಭುಗಿಲೆದ್ದ ನೆರೆ ಸಂತ್ರಸ್ತರ ಆಕ್ರೋಶ..
ನಿಜವಾದ ಫಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸುವಲ್ಲಿ ಹಿರಿಯ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಗದಗ ಜಿಲ್ಲೆಯ ರೋಣ ತಾಲೂಕಿನ ಯಾಸ ಹಡಗಲಿ ಗ್ರಾಮದಲ್ಲಿ ನೆರೆ ಸಂತ್ರಸ್ತರು ಪ್ರತಿಭಟನೆ ನಡೆಸಿದರು.
ಪ್ರವಾಹ ಪರಿಹಾರದ ಚೆಕ್ ವಿತರಣೆಯಲ್ಲಿ ತಾರತಮ್ಯ: ಅಧಿಕಾರಿಗಳ ವಿರುದ್ದ ನೆರೆ ಸಂತ್ರಸ್ತರ ಆಕ್ರೋಶ.
ರೋಣ ತಹಶೀಲ್ದಾರ‌್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ನೆರೆ ಸಂತ್ರಸ್ತರು ಅಧಿಕಾರಿಗಳು ಚೆಕ್ ವಿತರಿಸುವಲ್ಲಿ ನಮಗೆಲ್ಲ ಅನ್ಯಾಯ ಮಾಡುತ್ತಿದ್ದಾರೆ. ಪ್ರವಾಹ ಬಂದು ಕುಟುಂಬಗಳುಮುಳುಗಡೆಯಾಗಿವೆ. ಆದರೆ, ತಮಗೆ ಬೇಕಾದವರಿಗೆ ಬೇಕಾಬಿಟ್ಟಿ ಪರಿಹಾರ ಚೆಕ್ ವಿತರಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.
ನಿಜವಾದ ಫಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸುವಲ್ಲಿ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು.ಇಲ್ಲದೇ ಹೋದಲ್ಲಿ ನಮಗಾದ ಅನ್ಯಾಯವನ್ನ ನಾವು ಯಾರಿಗೆ ಹೇಳೋಣ ಅಂತಾ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.