ಕರ್ನಾಟಕ

karnataka

ETV Bharat / state

ಮಲಪ್ರಭಾ ನದಿ ತೀರದ ಜನರಿಗೆ ನೆರೆ ಭೀತಿ: ಊರ ಹೊರಗಡೆ ಟ್ರ್ಯಾಕ್ಟರ್​ನಲ್ಲಿ ಗ್ರಾಮಸ್ಥರ ವಾಸ್ತವ್ಯ - ಗದಗ ನೆರೆ ಭೀತಿ

ಜಿಲ್ಲಾಡಳಿತ ಬೆಳಿಗ್ಗೆಯಿಂದ ಸ್ಥಳಾಂತರ ಮಾಡಲು ಗ್ರಾಮಸ್ಥರ ಮನವೊಲಿಕೆಗೆ ನಿಂತಿತ್ತು. ಪಕ್ಕದ ಹಳ್ಳಿ ಬೆಳ್ಳೇರಿ ಗ್ರಾಮದಲ್ಲಿ ಪರಿಹಾರ ಕೇಂದ್ರವನ್ನೂ ಸಹ ಜಿಲ್ಲಾಡಳಿತ ತೆರೆದಿದೆ. ಆದರೆ ಪರಿಹಾರ ಕೇಂದ್ರಕ್ಕೆ ತೆರಳಲು ಗ್ರಾಮಸ್ಥರು ಹಿಂದೇಟು ಹಾಕಿದ್ದಾರೆ.

ಊರ ಹೊರಗಡೆ ಟ್ರ್ಯಾಕ್ಟರ್​ನಲ್ಲಿ ಗ್ರಾಮಸ್ಥರ ವಾಸ್ತವ್ಯ
ಊರ ಹೊರಗಡೆ ಟ್ರ್ಯಾಕ್ಟರ್​ನಲ್ಲಿ ಗ್ರಾಮಸ್ಥರ ವಾಸ್ತವ್ಯ

By

Published : Aug 16, 2020, 9:20 PM IST

ಗದಗ:ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪೂರ ಗ್ರಾಮದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಜನರು ಊರ ಹೊರಗಡೆ ಟ್ರ್ಯಾಕ್ಟರ್​ಗಳ ಸಮೇತ ತಾತ್ಕಾಲಿಕವಾಗಿ ರಸ್ತೆ ಮಾರ್ಗದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಊರ ಹೊರಗಡೆ ಟ್ರ್ಯಾಕ್ಟರ್​ನಲ್ಲಿ ಗ್ರಾಮಸ್ಥರ ವಾಸ್ತವ್ಯ

ಸಾಲುಗಟ್ಟಿದ ಟ್ರ್ಯಾಕ್ಟರ್​ಗಳಿಗೆ ತಾಡಪಲ್ ಹಾಕಿಕೊಂಡು ಮಕ್ಕಳು, ವೃದ್ಧರು ಮಹಿಳೆಯರು ಸೇರಿದಂತೆ ಟ್ರ್ಯಾಕ್ಟರ್​ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನು ಮಲಪ್ರಭಾ ನದಿಯಲ್ಲಿ ಪ್ರವಾಹದ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ನೆರೆ ಭೀತಿ ಎದುರಾಗಿದೆ. ಹೀಗಾಗಿ ಜಿಲ್ಲಾಡಳಿತ ಬೆಳಗ್ಗೆಯಿಂದ ಸ್ಥಳಾಂತರ ಮಾಡಲು ಗ್ರಾಮಸ್ಥರ ಮನವೊಲಿಕೆಗೆ ನಿಂತಿತ್ತು. ಪಕ್ಕದ ಹಳ್ಳಿ ಬೆಳ್ಳೇರಿ ಗ್ರಾಮದಲ್ಲಿ ಪರಿಹಾರ ಕೇಂದ್ರವನ್ನೂ ಸಹ ಜಿಲ್ಲಾಡಳಿತ ತೆರೆದಿದೆ. ಆದರೆ ಪರಿಹಾರ ಕೇಂದ್ರಕ್ಕೆ ತೆರಳಲು ಗ್ರಾಮಸ್ಥರು ಹಿಂದೇಟು ಹಾಕಿದ್ದಾರೆ.

ಸದ್ಯ ಗ್ರಾಮಸ್ಥರ ಒತ್ತಾಯದ ಮೇರೆಗೆ ಊರ ಹೊರಗಡೆ ತಾತ್ಕಾಲಿಕ ಶೆಡ್​ಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ 17,000 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಲಖಮಾಪೂರ ಗ್ರಾಮವು ಮುಳುಗುವ ಸಾಧ್ಯತೆ ಇರುವುದರಿಂದ ಇಡೀ ಗ್ರಾಮದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.

ABOUT THE AUTHOR

...view details