ಕರ್ನಾಟಕ

karnataka

ETV Bharat / state

ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಐವರು ದರೋಡೆಕೋರರ ಬಂಧನ - Gadag crime news

ವಾಹನಗಳನ್ನು ಅಡ್ಡಗಟ್ಟಿ ಹೆದರಿಸಿ ಬೆದರಿಸಿ ಹಣ ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ದರೋಡೆಕೋರರನ್ನು ಬಂಧಿಸಲಾಗಿದೆ.

Arrested of gangsters
ದರೋಡೆಕೋರರ ಬಂಧನ

By

Published : Oct 11, 2020, 10:17 PM IST

ಗದಗ: ವಾಹನಗಳನ್ನು ಅಡ್ಡಗಟ್ಟಿ ಬೆದರಿಸಿ ಹಣ ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್​ವೊಂದನ್ನು ಗದಗ ಪೊಲೀಸರು ಬಂಧಿಸಿದ್ದಾರೆ.

ನಗರದ ದೋಭಿಘಾಟ್​ನ ಬಳಿ ರಿಂಗ್ ರೋಡ್​ನಲ್ಲಿ ರಸ್ತೆಗೆ ಅಡ್ಡಲಾಗಿ ಹಗ್ಗ ಹಿಡಿದು ಹೋಗೋ ಬರೋ ವಾಹನಗಳನ್ನು ನಿಲ್ಲಿಸಿ ವಾಹನದಲ್ಲಿ ಇದ್ದ ವ್ಯಕ್ತಿಗಳಿಂದ ಹಣ ಅಥವಾ ಚಿನ್ನಾಭರಣ ಇತರೆ ವಸ್ತುಗಳನ್ನು ದರೋಡೆ ಮಾಡುತ್ತಿದ್ದರು‌.

ಇನ್ನು ಎಲ್ಲಾ ಆರೋಪಿಗಳು ಗದಗ ನಗರದವರಾಗಿದ್ದು, ಆರೋಪಿತರಾದ ರೋಹಿತ್ ಕಟ್ಟಿಮನಿ, ಹನಮಂತ ಹಂದಿಗುಂದ, ಸುನಿಲ್, ಸಾಹಿಲ್, ಗಣೇಶ್​ರವರಿಂದ ಕೃತ್ಯಕ್ಕೆ ಬಳಸುತ್ತಿದ್ದ ರಾಡು, ಬಡಿಗೆ, ಚಾಕು, ಹಗ್ಗ ಸೇರಿದಂತೆ ಮತ್ತು 500 ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details