ಕರ್ನಾಟಕ

karnataka

ETV Bharat / state

ಗದಗದಲ್ಲಿ ಗುಡುಗು ಮಿಂಚು ಸಹಿತ ಮಳೆ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನಮರ - heavy rain in gadag

ಗದಗ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗುತ್ತಿದ್ದು, ಮಿಂಚಿನ ಹೊಡೆತಕ್ಕೆ ಹಾಗೂ ಸಿಡಿಲಿನ ಬಡಿತಕ್ಕೆ ತೆಂಗಿನ ಮರ ಹೊತ್ತಿ ಉರಿದಿದೆ.

ತೆಂಗಿನ ಮರ
ತೆಂಗಿನ ಮರ

By

Published : Apr 24, 2021, 10:14 PM IST

Updated : Apr 24, 2021, 10:39 PM IST

ಗದಗ:ಜಿಲ್ಲೆಯಾದ್ಯಂತ ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚು, ಬಿರುಗಾಳಿ ಸಹಿತ ವರುಣ ಆರ್ಭಟಿಸಿದ್ದಾನೆ. ಪರಿಣಾಮ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ತೆಂಗಿನಮರ ಹೊತ್ತಿ ಉರಿದಿದೆ.

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನಮರ

ಡೋಣಿ ಗ್ರಾಮದ ಹೊರವಲಯದಲ್ಲಿರುವ ಡಿಇಪಿ ಶಾಲೆ ಹತಿರ ಮಲ್ಲಪ ಕಡಕೋಳ ಎಂಬುವವರಿಗೆ ಸೇರಿದ ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮರಕ್ಕೆ ಸಿಡಿಲು ಬಡಿಯುತ್ತಿದ್ದಂತೆ ಗ್ರಾಮದಲ್ಲಿ ದೊಡ್ಡ ಶಬ್ದ ಕೇಳಿದ್ದು ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

Last Updated : Apr 24, 2021, 10:39 PM IST

ABOUT THE AUTHOR

...view details