ಗದಗ:ಮಲಪ್ರಭಾ ನದಿ ನಡುಗಡ್ಡೆಯಲ್ಲಿ ಸಿಲುಕಿದ ವೃದ್ಧನೋರ್ವನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಗದಗದಲ್ಲಿ ನಡೆದಿದೆ.
ಗದಗ: ಮಲಪ್ರಭಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ವೃದ್ಧನ ರಕ್ಷಣೆ - ಮಲಪ್ರಭಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ವೃದ್ಧನ ರಕ್ಷಣೆ
ಮಲಪ್ರಭಾ ನದಿಯ ನಡುಗಡ್ಡೆಯಲ್ಲಿ ಕುಳಿತು ರಕ್ಷಣೆಗೆ ಸಹಾಯ ಬೇಡುತ್ತಿದ್ದ ವೃದ್ಧನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.
![ಗದಗ: ಮಲಪ್ರಭಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ವೃದ್ಧನ ರಕ್ಷಣೆ Fire dept staff rescued old man](https://etvbharatimages.akamaized.net/etvbharat/prod-images/768-512-13083219-thumbnail-3x2-net.jpg)
ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ನಿವಾಸಿ ಬಸಪ್ಪ ತಳವಾರ (60) ಎಂಬಾತ ಸ್ನಾನ ಮಾಡಲು ತೆರಳಿದ ವೇಳೆ ಮಲಪ್ರಭಾ ನದಿಯಲ್ಲಿ ತೇಲಿಕೊಂಡು ಹೋಗುತ್ತಿದ್ದ. ಬಳಿಕ ನದಿಯ ನಡುಗಡ್ಡೆಯಲ್ಲಿ ಕುಳಿತು ರಕ್ಷಣೆಗೆ ಸಹಾಯ ಬೇಡುತ್ತಿದ್ದ. ಸುಮಾರು 2 ಗಂಟೆಗಳ ಕಾಲ ನಡುಗಡ್ಡೆಯಲ್ಲಿ ಕುಳಿತಿದ್ದ ವೃದ್ಧನ ರಕ್ಷಣೆಗೆ ಬಾದಾಮಿ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ, ಬೋಟ್ ಮೂಲಕ ರಕ್ಷಿಸಿದ್ದಾರೆ.
ಹಲವು ದಿನಗಳಿಂದ ಶಾಂತವಾಗಿದ್ದ ನದಿ ಈಗ ತುಂಬಿ ಹರಿಯುತ್ತಿದೆ. ನಿನ್ನೆ (ಬುಧವಾರ) ಯಿಂದ ಮಲಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ ನೀರಿನ ಹರಿವು ಹೆಚ್ಚಳವಾಗಿದ್ದ ಪರಿಣಾಮ ಮತ್ತೆ ಪ್ರವಾಹ ಭೀತಿ ಎದುರಾಗಿತ್ತು. ಇಂತಹ ಸಮಯದಲ್ಲಿ ಮುನ್ನೆಚ್ಚರಿಕೆಯಿಲ್ಲದೆ, ನದಿಗೆ ಇಳಿದಿರುವುದು ಈ ಅವಘಡಕ್ಕೆ ಕಾರಣವಾಗಿದೆ.