ಗದಗ: ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಘಟನೆ ಗದಗನ ಬೆಟಗೇರಿಯ ಸೆಟಲ್ಮೆಂಟ್ ಏರಿಯಾದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ 2 ಕುಟುಂಬಗಳ ನಡುವೆ ಮಾರಕಾಸ್ತ್ರಗಳಿಂದ ಮಾರಾಮಾರಿ: ನಾಲ್ವರಿಗೆ ಗಾಯ - ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ಸುದ್ದಿ
ಗದಗದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
![ಕ್ಷುಲ್ಲಕ ಕಾರಣಕ್ಕೆ 2 ಕುಟುಂಬಗಳ ನಡುವೆ ಮಾರಕಾಸ್ತ್ರಗಳಿಂದ ಮಾರಾಮಾರಿ: ನಾಲ್ವರಿಗೆ ಗಾಯ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಮಾರಕಾಸ್ತ್ರಗಳಿಂದ ಮಾರಾಮಾರಿ](https://etvbharatimages.akamaized.net/etvbharat/prod-images/768-512-7759502-447-7759502-1593049103212.jpg)
ನಡು ರಸ್ತೆಯಲ್ಲೆ ಲಾಂಗು, ಮಚ್ಚುಗಳಿಂದ ಬಡಿದಾಡಿಕೊಂಡ ಹಿನ್ನೆಲೆಯಲ್ಲಿ ಅನೇಕ ಕಡೆ ರಸ್ತೆ ರಕ್ತಸಿಕ್ತ ವಾಗಿದೆ. ಬುಲೆಟ್ ಬೈಕ್, ಕಾರ್, ಮನೆಯ ಕಿಟಕಿ, ಬಾಗಿಲು ಜಖಂ ಆಗಿದ್ದು, ಇದರಲ್ಲಿ ಏಸುಕುಮಾರ ಹೊಸಮನಿ,(35) ಅನಿಲ ಮುತಗಾರ,(38) ಗೋವಿಂದ ಮುತಗಾರ, (40) ಶಾಕಮ್ಮ (35) ಎಂಬುವವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಂಜುನಾಥ ಜಾಧವ್, ವಿಕಾಸ್ ಜಾಧವ್ ಎಂಬುವವರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಗದಗ ಡಿವೈಎಸ್ಪಿ ಕೆ. ಪ್ರಹ್ಲಾದ್, ಸಿಪಿಐ ಕಿರಣ ಕುಮಾರ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗದ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.