ಕರ್ನಾಟಕ

karnataka

ETV Bharat / state

ಗದಗನಲ್ಲಿ ರಸಗೊಬ್ಬರ ಅಭಾವ: ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ - ರಸಗೊಬ್ಬರ ಅಭಾವ

ಸಮರ್ಪಕವಾಗಿ ಗೊಬ್ಬರ ಪೂರೈಕೆಯಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

By

Published : Aug 28, 2020, 3:53 PM IST

ಗದಗ: ಸೂಕ್ತ ಸಮಯಕ್ಕೆ ಸಮರ್ಪಕವಾಗಿ ಗೊಬ್ಬರ ಸಿಗದಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡ ರೈತರು ರಾಷ್ಟ್ರೀಯ ಹೆದ್ದಾರಿ 218ನ್ನು ಬಂದ್​ ಮಾಡಿ ಅಸಮಾಧಾನ ಹೊರಹಾಕಿರುವ ಘಟನೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

ಪ್ರವಾಹದಿಂದ ಬೆಳೆ ನಷ್ಡದಲ್ಲಿರುವ ಕೊಣ್ಣೂರ ಗ್ರಾಮದ ರೈತರಿಗೆ ಈಗ ರಸಗೊಬ್ಬರ ಅಭಾವ ಉಂಟಾಗಿದೆ. ಇಂದು ಒಂದು ಲೋಡ್​ ಗೊಬ್ಬರ ಕೊಣ್ಣೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಬಂದಿದೆ. ಈ ಸಂಘದಿಂದ ಖಾತೆ ಹೊಂದಿದ್ದ ರೈತರಿಗೆ ರಸಗೊಬ್ಬರ ವಿತರಣೆ ಮಾಡಲಾಗುತ್ತಿದ್ದು, ಇಲ್ಲಿ ಖಾತೆ ತೆರೆದಿರುವ ರೈತರಿಗೆ ಮಾತ್ರ ಎರಡು ಮೂಟೆ ಗೊಬ್ಬರ ವಿತರಿಸಲಾಗುತ್ತಿದೆ. ಖಾತೆ ಇಲ್ಲದ ರೈತರಿಗೆ ಗೊಬ್ಬರ ಕೊಡುವುದಿಲ್ಲ ಎಂದು ಸಂಘದ ಸಿಬ್ಬಂದಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು, ಹೆದ್ದಾರಿಗೆ ಅಡ್ಡಲಾಗಿ ಬೇಲಿ ಹಾಕಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆ ನಡೆದ ಸ್ಥಳಕ್ಕೆ ನರಗುಂದ ತಹಶೀಲ್ದಾರ ಭೇಟಿ ನೀಡಿ ರೈತರ ಮನವೊಲಿಸಲು ಯತ್ನಿಸಿದ್ದಾರೆ. ಬಳಿಕ ರೈತರು ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.

ABOUT THE AUTHOR

...view details