ಕರ್ನಾಟಕ

karnataka

ETV Bharat / state

ಕೊರೊನಾಗೆ ಹೆದರಿ ಜಿಮ್ಸ್ ಆಸ್ಪತ್ರೆ ಕಟ್ಟಡದಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

ಕೊರೊನಾ ಸೋಂಕಿಗೆ ಹೆದರಿ ಜಿಮ್ಸ್ ಆಸ್ಪತ್ರೆಯ ಮೇಲಿಂದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.

ಆಸ್ಪತ್ರೆ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಆಸ್ಪತ್ರೆ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

By

Published : Sep 4, 2020, 11:04 AM IST

Updated : Sep 4, 2020, 11:13 AM IST

ಗದಗ:ಕೊರೊನಾ ಸೋಂಕಿಗೆ ಹೆದರಿ ಆಸ್ಪತ್ರೆಯ ಕಟ್ಟಡಿಂದ ಬಿದ್ದು ವ್ಯಕ್ತಿವೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಲಸಮುದ್ರ ಬಳಿಯ ಜಿಮ್ಸ್ ಆಸ್ಪತ್ರೆಯಯಲ್ಲಿ ನಡೆದಿದೆ.

40 ವರ್ಷ ವಯಸ್ಸಿನ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಈತ ಕೊರೊನಾ ಸೋಂಕಿನ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಗುರುವಾರ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಸ್ಟ್ಯಾಬ್ ಟೆಸ್ಟ್ ಮಾಡಿಸಿದ್ದಾನೆ. ಬಳಿಕ ಈತನ ವರದಿ ಪಾಸಿಟಿವ್​ ಬಂದಿದೆ. ಇದರಿಂದ ಆತಂಕಗೊಂಡ ವ್ಯಕ್ತಿ​ ರಾತ್ರಿ ವೇಳೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಸ್ಪತ್ರೆ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಇನ್ನು, ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 4, 2020, 11:13 AM IST

ABOUT THE AUTHOR

...view details