ಗದಗ :ಸಾಲಬಾಧೆಗೆ ರೈತನೋರ್ವ ನೇಣಿಗೆ ಶರಣಾಗಿರೋ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಶಿರೋಳದಲ್ಲಿ ನಡೆದಿದೆ.
ಬೆಳೆದ ಬೆಳೆಗೆ ಸಿಗಲಿಲ್ಲ ಸೂಕ್ತ ಬೆಲೆ... ಮನನೊಂದ ರೈತ ಆತ್ಮಹತ್ಯೆಗೆ ಶರಣು - ಬಸಪ್ಪ ಕೊರ್ಲಹಳ್ಳಿ (56) ಮೃತ ರೈತ
ಸಾಲಬಾಧೆ ತಾಳಲಾರದೆ ಜಿಲ್ಲೆಯ ಮುಂಡರಗಿ ತಾಲೂಕಿನ ಶಿರೋಳದಲ್ಲಿ ಬಸಪ್ಪ ಕೊರ್ಲಹಳ್ಳಿ (56) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಸಪ್ಪ ಕೊರ್ಲಹಳ್ಳಿ (56) ಮೃತ ರೈತ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತನಗಿರುವ ಮೂರು ಎಕರೆ ಜಮೀನಿನ ಆಧಾರದ ಮೇಲೆ ಮುಂಡರಗಿ ಕೆವಿಜಿ ಬ್ಯಾಂಕ್ನಲ್ಲಿ 2 ಲಕ್ಷ ರೂ, ಹಾಗೂ ಬೇರೆ ಕಡೆ ಸುಮಾರು 1 ಲಕ್ಷ ರೂ ಕೈಸಾಲ ಮಾಡಿದ್ದನು.
ಸಜ್ಜೆ, ಮೆಕ್ಕೆಜೋಳ ಬೆಳೆದಿದ್ದ ರೈತ ಬಸಪ್ಪ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಕ್ಕುಟೋದ್ಯಮ ನೆಲಕಚ್ಚಿದ ಹಿನ್ನಲೆಯಲ್ಲಿ ಮೆಕ್ಕೆಜೋಳದ ಬೆಲೆ ದಿಢೀರ್ ಕುಸಿದಿದೆ . ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಜೊತೆಗೆ ಬೆಂಬಲ ಬೆಲೆಗೆ ಆಗ್ರಹಿಸುತ್ತಿದ್ದಾರೆ. ಈ ನಡುವೆ ಬಸಪ್ಪ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.