ಗದಗ : ಕೊರೊನಾ ಲಾಕ್ಡೌನ್ ಹಿನ್ನೆಲೆ ಹೂ ಬೆಳೆದ ರೈತರು ಸಂಕಷ್ಟ ಎದುರಿಸುತ್ತಿದ್ದು, ಸಾಕಷ್ಟು ಹಾನಿಗೊಳಗಾಗಿದ್ದಾರೆ. ಈ ಹಿನ್ನೆಲೆ ರೈತನೊಬ್ಬ ಟ್ರ್ಯಾಕ್ಟರ್ ಮೂಲಕ ತಾನು ಬೆಳೆದ ಹೂವಿನ ಬೆಳೆಯನ್ನು ನಾಶಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಹೂವಿನ ಬೆಳೆ ನಾಶ ಮಾಡಿದ ರೈತ.. ಓದಿ: COVID update: ರಾಜ್ಯದಲ್ಲಿಂದು 10 ಸಾವಿರಕ್ಕಿಂತ ಕಡಿಮೆ ಕೇಸ್ಗಳು ಪತ್ತೆ, 179 ಸೋಂಕಿತರು ಸಾವು
ಗದಗ ತಾಲೂಕಿನ ಸಂಭಾಪೂರ ಗ್ರಾಮದ ಕಿರಣಗೌಡ ಬಂಡಿ ಎಂಬ ರೈತ ತನ್ನ ಮೂರು ಎಕರೆ ಹೊಲದಲ್ಲಿ ಸೇವಂತಿ ಹೂವಿನ ಬೆಳೆ ಬೆಳೆದಿದ್ದು, ಅದಕ್ಕೆ ಸುಮಾರು 3 ಲಕ್ಷ ರೂಪಾಯಿವರೆಗೂ ಖರ್ಚು ಮಾಡಿ ಕೈ ಸುಟ್ಟುಕೊಂಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಹೂವಿನ ಬೆಲೆ ಸಹ ನೆಲಕಚ್ಚಿದ್ದು, ಯಾರೂ ಕೇಳದ ಹಾಗೆ ಆಗಿದೆ. ಇದರಿಂದ ಕಿರಣಗೌಡ ಬೇಸರವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇನ್ನು, ಸರ್ಕಾರ ನೀಡುತ್ತಿರುವ ಹತ್ತು ಸಾವಿರ ರೂಪಾಯಿ ಆಳುಗಳ ಖರ್ಚನ್ನೂ ಸಹ ನೀಗಿಸುತ್ತಿಲ್ಲ. ಹೀಗಿದ್ದಾಗ, ಸಾಲ-ಸೂಲ ಮಾಡಿ ಬೆಳೆದ ನಮ್ಮ ಪಾಡು ಯಾರಿಗೆ ಹೇಳೋಣ. ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಪರಿಹಾರ ಮೊತ್ತ ನೀಡಲಿ ಎಂದು ಆಗ್ರಹಿಸಿದ್ದಾರೆ ಕಿರಣಗೌಡ.