ಗದಗ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದಿದೆ. ಶಿಗ್ಲಿ ಗ್ರಾಮದ ನಿವಾಸಿ 36 ವರ್ಷದ ಕೊಟ್ರಪ್ಪ ಅಣ್ಣಿಗೇರಿ ಎಂಬ ರೈತ ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆಗೆ ಶರಣು - Farmer committed suicide in Gadag,
ಸಾಲಕ್ಕೆ ಹೆದರಿದ ರೈತನೊಬ್ಬ ಆತ್ಮಹತ್ಯೆ ಶರಣಾಗಿರುವ ಘಟನೆ ಗದಗದಲ್ಲಿ ನಡೆದಿದೆ.
![ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆಗೆ ಶರಣು Farmer committed suicide, Farmer committed suicide in Gadag, Gadag farmer susi, ರೈತ ಆತ್ಮಹತ್ಯೆಗೆ ಶರಣು, ಗದಗದಲ್ಲಿ ರೈತ ಆತ್ಮಹತ್ಯೆಗೆ ಶರಣು, ರೈತ ಆತ್ಮಹತ್ಯೆಗೆ ಶರಣು ಸುದ್ದಿ,](https://etvbharatimages.akamaized.net/etvbharat/prod-images/768-512-6292543-48-6292543-1583344936922.jpg)
ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆಗೆ ಶರಣು
ಮೃತ ವ್ಯಕ್ತಿ ಕೆನರಾ ಬ್ಯಾಂಕ್ನಲ್ಲಿ ಸುಮಾರು 2 ಲಕ್ಷ ರೂಪಾಯಿ ಸಾಲ ಹಾಗೂ ಕೈ ಸಾಲವನ್ನು ಮಾಡಿಕೊಂಡಿದ್ದ. ತನ್ನ 5 ಎಕರೆ ಜಮೀನಿನಲ್ಲಿ ಸರಿಯಾಗಿ ಬೆಳೆ ಬಾರದಿದಕ್ಕೆ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.