ಗದಗ:ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಗದಗದಲ್ಲಿ ನಡೆದಿದೆ.
ಗದಗ: ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ - farmer committed suicide in gadag
ಗದಗ ಜಿಲ್ಲೆ ನರಗುಂದ ಪಟ್ಟಣದ ಜಮಲಾಪುರ ಬಡಾವಣೆಯ ನಿವಾಸಿ ಶಿವಪ್ಪ ಎಂಬುವವರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಮಾರು ₹ 5 ಲಕ್ಷದವೆರಗೂ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
![ಗದಗ: ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ farmer committed suicide in gadag](https://etvbharatimages.akamaized.net/etvbharat/prod-images/768-512-5693061-thumbnail-3x2-gdg.jpg)
ಸಾಲಬಾಧೆಗೆ ರೈತ ಆತ್ಮಹತ್ಯೆ
ಜಿಲ್ಲೆಯ ನರಗುಂದ ಪಟ್ಟಣದ ಜಮಲಾಪುರ ಬಡಾವಣೆಯ ನಿವಾಸಿ ಶಿವಪ್ಪ ಕವಡೆ (52) ಮೃತ ದುರ್ದೈವಿ. ನರಗುಂದ ಸಿಂಡಿಕೇಟ್ ಬ್ಯಾಂಕ್ನಲ್ಲಿ ₹ 3.10 ಲಕ್ಷ ಸೇರಿದಂತೆ ₹ 5 ಲಕ್ಷದವರೆಗೂ ಕೈ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಫಸಲು ಬಾರದ ಹಿನ್ನೆಲೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.