ಗದಗ :ಫೆಬ್ರವರಿ 19 ರಂದು ಅರಳು ಹುರಿದಂತೆ ಗಣ್ಯೋತ್ತಮರ ಇತಿಹಾಸ ತೆರೆದಿಡೋ ಚತುರ.. ಮಿನಿ ಕಂಪ್ಯೂಟರ್ ಎಂದೇ ಖ್ಯಾತಿ ಈತ! ಎಂಬ ಶೀರ್ಷಿಕೆ ಅಡಿಯಲ್ಲಿ ಗದಗ ಹುಡ್ಕೋ ಕಾಲೋನಿ ನಿವಾಸಿ ಅಥರ್ವ ಖಟವಟೆ ಎಂಬ ಬಾಲಕನ ವಿಶೇಷ ಪ್ರತಿಭೆ ಗುರ್ತಿಸಿ ಈಟಿವಿ ಭಾರತ ಮೊದಲಿಗೆ ಸುದ್ದಿ ಮಾಡಿತ್ತು. ಈಗ ಅದೇ ಬಾಲಕನಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಈತನ ಪ್ರತಿಭೆ ದಾಖಲಾಗಿದೆ.
ಅಥರ್ವ ಖಟವಟೆ ಸುಮಾರು 1,500ಕ್ಕೂ ಹೆಚ್ಚು ಗಣ್ಯಮಾನ್ಯರ ಹೆಸರುಗಳನ್ನು ಅವರ ಹುಟ್ಟಿದ ದಿನಾಂಕ ಮತ್ತು ಅವರ ಪತ್ನಿ, ಮಕ್ಕಳ ಹುಟ್ಟಿದ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡು ಪಟಪಟನೆ ಪ್ರಶ್ನೆಗೆ ತಕ್ಕಂತೆ ಉತ್ತರ ಕೊಡ್ತಾನೆ. ಈತನಿಗೆ ಒಲಿದ ಈ ವಿಶೇಷ ಪ್ರಶಸ್ತಿಯಿಂದ ಅವರ ಪೋಷಕರು ಫುಲ್ ಖುಷ್ ಆಗಿದ್ದಾರೆ.