ಕರ್ನಾಟಕ

karnataka

ETV Bharat / state

'ಈಟಿವಿ ಭಾರತ' ಇಂಪ್ಯಾಕ್ಟ್: ಬಡ ನೇಕಾರನ ಕುಟುಂಬಕ್ಕೆ ದಾನಿಗಳಿಂದ ನೆರವು.! - ಬಡ ನೇಕಾರನ ಕುಟುಂಬಕ್ಕೆ ದಾನಿಗಳಿಂದ ನೆರವು

ಲಾಕ್‌ಡೌನ್ ಸಂದರ್ಭದಲ್ಲಿ ಮನೆಯ ಯಜಮಾನ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡದಿದ್ದರು. ನೇಕಾರಿಕೆಯನ್ನು ನಂಬಿದ್ದ ಆ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಇದನ್ನು ಮನಗಂಡು 'ಈಟಿವಿ ಭಾರತ' ಸುದ್ದಿ ಪ್ರಸಾರ ಮಾಡಿತ್ತು.

'ETV Bharat' Impact story gadaga
ಬಡ ನೇಕಾರನ ಕುಟುಂಬಕ್ಕೆ ದಾನಿಗಳಿಂದ ನೆರವು

By

Published : Jun 9, 2020, 6:45 PM IST

ಗದಗ: ನಗರದ ಬೆಟಗೇರಿಯ ದುರುವಾಸಪ್ಪ ಶ್ಯಾಗಾವಿ ಎಂಬ ನೇಕಾರಿಕೆ ಕುಟುಂಬದ ಕಣ್ಣೀರಿನ‌ ಕಥೆಯ ಕುರಿತು, ಇದೇ 7 ರಂದು 'ಈಟಿವಿ ಭಾರತ'ದಲ್ಲಿ 'ಹೊತ್ತಿನ ತುತ್ತಿಗೂ ಪರದಾಟ... ನೇಕಾರನ ಕುಟುಂಬದ ಕಣ್ಣೀರಿನ ಕಥೆ' ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡಲಾಗಿತ್ತು. ವರದಿಯನ್ನು ನೋಡಿದ ಅನೇಕ ದಾನಿಗಳು ನೊಂದ‌ ಬಡ ಕುಟುಂಬದ ಕಣ್ಣೀರು ಒರೆಸಿದ್ದಾರೆ.

ಇದನ್ನು ಓದಿ:ಹೊತ್ತಿನ ತುತ್ತಿಗೂ ಪರದಾಟ....ನೇಕಾರನ ಕುಟುಂಬದ‌ ಕಣ್ಣೀರಿನ ಕಥೆ!

ಕುಟುಂಬದಲ್ಲಿ ಒಟ್ಟು 7 ಜನ ಸದಸ್ಯರಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಮನೆಯ ಯಜಮಾನ ದುರುವಾಸಪ್ಪ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡದಿದ್ದರು. ನೇಕಾರಿಕೆಯನ್ನು ನಂಬಿದ್ದ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಕುಟುಂಬದಲ್ಲಿ 5 ಜನ‌ ಹೆಣ್ಣು ಮಕ್ಕಳಿದ್ದು, ಚಿಕಿತ್ಸೆ ಹಾಗೂ ಹೊತ್ತಿನ ಊಟಕ್ಕೆ ಏನು ಮಾಡೋದು ಎಂದು ಕಂಡವರ ಹತ್ತಿರ ಕೈ ಚಾಚಿ ಬೇಡಿ ತಿನ್ನುವ ಪರಸ್ಥಿತಿ ಎದುರಾಗಿತ್ತು.

ಬಡ ನೇಕಾರನ ಕುಟುಂಬಕ್ಕೆ ದಾನಿಗಳಿಂದ ನೆರವು

ಇದನ್ನು ಮನಗಂಡು 'ಈಟಿವಿ ಭಾರತ' ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿಯನ್ನು ನೋಡಿ ಅನೇಕ ದಾನಿಗಳು ಮೆಡಿಸನ್, ಆಹಾರ ಕಿಟ್ ಹಾಗೂ ಹಣ ನೀಡಿ ಮಾನವೀಯತೆ‌ ಮೆರೆಯುತ್ತಿದ್ದಾರೆ. ಬಣಜಿಗ ಸಂಘದಿಂದ 11 ಸಾವಿರ ರೂಪಾಯಿ ಹಾಗೂ ಗೋವಿಂದ ಎಂಬುವವರು 5 ಸಾವಿರ ಹಾಗೂ ಆಹಾರ ಕಿಟ್ ನೀಡಿ, ನಿಮ್ಮೊಂದಿಗೆ‌ ನಾವಿದ್ದೇವೆಎಂದು ಧೈರ್ಯ ತುಂಬಿದ್ದಾರೆ.

ABOUT THE AUTHOR

...view details