ಗದಗ: ಸರ್ಕಾರಿ ಆಸ್ತಿ ಅಂದ್ರೆ ಹೇಳೋರು ಕೇಳೋರು ಯಾರೂ ಇಲ್ಲ ಅಂತಾ ಗುಳುಂ ಮಾಡೋರೆ ಸಂಖ್ಯೆ ಹೆಚ್ಚಾಗಿದೆ. ಯಾರೂ ಬೇಕಾದರೂ ಒತ್ತುವರಿ ಮಾಡಿಕೊಳ್ಳಬಹುದು ಅನ್ನುವ ಪರಿಸ್ಥಿತಿ ಇತ್ತು. ಆದರೆ, ಇಲ್ಲಿನ ಅಧಿಕಾರಿಗಳು ಅದಕ್ಕೆ ಬ್ರೇಕ್ ಹಾಕ್ತಿದ್ದಾರೆ. ನಗರದಲ್ಲಿ ಅತಿಕ್ರಮಣವಾಗಿರೋ ನಗರಸಭೆ ಆಸ್ತಿಯನ್ನ ಗುರುತಿಸಿ ತೆರವು ಕಾರ್ಯಾಚರಣೆ ಮಾಡಲಾಗ್ತಿದೆ.
ಗದಗ-ಬೆಟಗೇರಿ ನಗರಸಭೆಯ 12 ನೇ ವಾರ್ಡ್ನಲ್ಲಿ ನಗರಸಭೆಯ ಆಸ್ತಿಯನ್ನು ಅತಿಕ್ರಮಣ ಮಾಡಿ ನಿರ್ಮಿಸಲಾದ ಕಟ್ಟಡಗಳನ್ನ ಜೆಸಿಬಿ ಮೂಲಕ ತೆರವುಗೊಳಿಸಲಾಯ್ತು. ನಗರಸಭೆ ಮತ್ತು ರೈಲ್ವೆ ಇಲಾಖೆಯ ಆಸ್ತಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದರು.