ಗದಗ:ಯುವಕರು ಕಂಠಪೂರ್ತಿ ಕುಡಿದು ಮಾಡಿದ ರಾದ್ದಾಂತ, ರಂಪಾಟ ಕಂಡು ಪೊಲೀಸರೇ ಸುಸ್ತಾದ ಘಟನೆ ಗದಗ ನಗರದಲ್ಲಿ ನಡೆದಿದೆ.
ಕಂಠಪೂರ್ತಿ ಕುಡಿದ ಯುವಕರ ರಂಪಾಟ ಕಂಡು ಪೊಲೀಸರೇ ಸುಸ್ತು! ವಿಡಿಯೋ - ಪೊಲೀಸರೊಂದಿಗೆ ಯುವಕರ ರಂಪಾಟ
ಕುಡಿದು ಅಡ್ಡಾದಿಡ್ಡಿ ವಾಹನ ಓಡಿಸುತ್ತಿದ್ದ ಯುವಕರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳ ಜೊತೆ ಯುವಕರು ಅನುಚಿತವಾಗಿ ವರ್ತಿಸಿದ್ದಾರೆ.
ನಗರದ ರಿಂಗ್ ರೋಡ್ ಬಳಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ ಓಡಿಸುತ್ತಿದ್ದವರನ್ನು ಪೊಲೀಸರು ತಡೆದಿದ್ದಾರೆ. ಆರ್.ಟಿ.ಓ ಅಧಿಕಾರಿಗಳೆಂದು ತಿಳಿದು ಪೊಲೀಸರೊಂದಿಗೆ ಯುವಕರು ಅನುಚಿತ ವರ್ತನೆ ತೋರಿದ್ದಾರೆ. ಹುಬ್ಬಳ್ಳಿ ಮೂಲದ ಅಖೀಲ್(20), ರಾಹುಲ್(18) ಹಾಗೂ ಗದಗ ನಿವಾಸಿಗಳಾದ ಪ್ರತೀಕ್(25), ಪ್ರಮೋದ್ (25) ಗಲಾಟೆ ಮಾಡಿದ ಯುವಕರು.
ಕುಡಿದ ಮತ್ತಿನಲ್ಲಿ ಹುಬ್ಬಳ್ಳಿಗೆ ಬನ್ನಿ ಅಂತಾ ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಅಷ್ಟೆ ಅಲ್ಲದೆ ಕಾರಿಗೆ ಗುದ್ದಿ, ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಯುವಕರ ಆಟಾಟೋಪವನ್ನು ಪೊಲೀಸರು ವಿಡಿಯೋ ಮಾಡುತ್ತಿರುವುದನ್ನು ಕಂಡು ಮೊಬೈಲ್ ಕೂಡ ಕಸಿದುಕೊಂಡಿದ್ದಾರೆ. ನಂತರ ಶಹರ ಠಾಣೆಯ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ, ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಗದಗ ಶಹರ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರಕಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.