ಕರ್ನಾಟಕ

karnataka

ETV Bharat / state

ಗದಗದಲ್ಲಿ ಬೇಕಾಬಿಟ್ಟಿ ಓಡಾಡಿದ್ರೆ ಹುಷಾರ್; ನಿಮ್ಮ ಮೇಲಿರುತ್ತೆ ಡ್ರೋಣನ ಕಣ್ಣು - ಡ್ರೋನ್ ಕ್ಯಾಮರಾ ಮೂಲಕ ನಿಗಾ

ಬೇಕಾಬಿಟ್ಟಿಯಾಗಿ ಓಡಾಡುವವರ ಮೇಲೆ ಡ್ರೋನ್ ಕ್ಯಾಮರಾ ಮೂಲಕ ನಿಗಾವಹಿಸಲಾಗ್ತಿದೆ. ಈ ಮೂಲಕ ಪೊಲೀಸ್ ಇಲಾಖೆಯು ಲಾಕ್ ಡೌನ್ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣಕ್ಕೆ ಕ್ರಮಕ್ಕೆ ಮುಂದಾಗಿದೆ. ‌

Drone camera
ನಿಮ್ಮ ಮೇಲೆ ಒಂದು ಕಣ್ಣು...

By

Published : Apr 14, 2020, 4:52 PM IST

ಗದಗ : ದೇಶಾದ್ಯಂತ ಲಾಕ್ ಡೌನ್‌ ಮುಂದೆವರೆದಿದೆ. ಏಪ್ರಿಲ್ 20 ರ ವರಗೆ ಟಫ್ ಲಾಕ್ ಡೌನ್ ಜಾರಿಗೊಳಿಸುವ ಉದ್ದೇಶದಿಂದ ಗದಗ ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ನಿಮ್ಮ ಮೇಲೆ ಒಂದು ಕಣ್ಣು...

ಈ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವವರ ಮೇಲೆ ಡ್ರೋನ್ ಕ್ಯಾಮರಾ ಮೂಲಕ ನಿಗಾವಹಿಸಲಾಗ್ತಿದೆ. ಈ ಮೂಲಕ ಪೊಲೀಸ್ ಇಲಾಖೆಯು ಲಾಕ್ ಡೌನ್ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣಕ್ಕೆ ಕ್ರಮಕ್ಕೆ ಮುಂದಾಗಿದೆ. ‌ಡ್ರೋನ್ ಕ್ಯಾಮರಾ ಮೂಲಕ ಅವರ ಚಲನ ವಲನಗಳ ಮೇಲೆ ನಿಗಾವಹಿಸಿದೆ.

ವಿನಾಕಾರಣ ಮನೆಯಿಂದ ಹೊರಗಡೆ ಬಂದ್ರೆ ಪೊಲೀಸರ ಡ್ರೋನ್ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯುತ್ತೆ.‌ ಮೊದಲು ಕಂಟೈನ್ಮೆಂಟ್ ಝೋನ್ ನ ಜನ ಅನಾವಶ್ಯಕವಾಗಿ ಯಾರಾದ್ರೂ ತಿರುಗಾಡ್ತಿದ್ದಾರಾ ಎಂಬುದನ್ನ ತಿಳಿದುಕೊಳ್ಳಲು ಈ ಡ್ರೋನ್ ಕ್ಯಾಮರಾ ಬಳಸುತ್ತಿದ್ದರು. ಸದ್ಯ ಲಾಕ್ ಡೌನ್ ಉಲ್ಲಂಘನೆ ಮಾಡಿ ಜನರು ಎಲ್ಲೆಂದರಲ್ಲಿ ಓಡಾಡ್ತಿದ್ದಾರೆ. ಜನರನ್ನು ಲಾಕ್ ಮಾಡಲು ನಗರದ ಪ್ರಮುಖ‌ ಕಡೆಗಳಲ್ಲಿ ಈ ಡ್ರೋನ್ ಬಳಕೆ‌ ಮಾಡಲಾಗುತ್ತಿದೆ.

ABOUT THE AUTHOR

...view details