ಗದಗ: ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟ್ರೇಚ್ಚರ್ ಮತ್ತು ವ್ಹೀಲ್ ಚೇರ್ ಸೌಲಭ್ಯವಿಲ್ಲದೇ ರೋಗಿಯೊಬ್ಬರನ್ನು ಅವರ ಸಂಬಂಧಿಕರು ಹೊತ್ತುಕೊಂಡು ಹೋಗುತ್ತಿರುವ ಘಟನೆ ಗದಗನ ಮಲ್ಲ ಸಮುದ್ರದ ಜೀಮ್ಸ್ ಆಸ್ಪತ್ರೆ ಯಲ್ಲಿ ನಡೆದಿದೆ.
ಹೆಗಲ ಮೇಲೆ ರೋಗಿ ಹೊತ್ತೊಯ್ದ ಸಂಬಂಧಿ: ಆಸ್ಪತ್ರೆ ಅವ್ಯವಸ್ಥೆ ವಿಡಿಯೋದಲ್ಲಿ ಬಯಲು - ಜಿಮ್ಸ್ನಲ್ಲಿ ಮೂಲ ಸೌಲಭ್ಯ ಕೊರತೆ
ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟ್ರೇಚ್ಚರ್ ಮತ್ತು ವ್ಹೀಲ್ ಚೇರ್ ಸೌಲಭ್ಯವಿಲ್ಲದೇ ರೋಗಿಯೊಬ್ಬರನ್ನು ಅವರ ಸಂಬಂಧಿಕರು ಹೊತ್ತುಕೊಂಡು ಹೋಗುತ್ತಿರುವ ಘಟನೆ ಗದಗನ ಮಲ್ಲ ಸಮುದ್ರದ ಜೀಮ್ಸ್ ಆಸ್ಪತ್ರೆ ಯಲ್ಲಿ ನಡೆದಿದೆ.

ಹೆಗಲ ಮೇಲೆ ರೋಗಿಯನ್ನು ಹೊತ್ತೊಯ್ಯುವ ವಿಡಿಯೋ ವೈರಲ್...
ಹೆಗಲ ಮೇಲೆ ರೋಗಿಯನ್ನು ಹೊತ್ತೊಯ್ಯುವ ವಿಡಿಯೋ ವೈರಲ್...
ಇಂತಹದ್ದೊಂದು ಅಮಾನವೀಯ ಘಟನೆ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ವೃದ್ಧೆಯನ್ನು ಸಂಬಂಧಿಕರೊಬ್ಬರು ಹೆಗಲ ಮೇಲೆ ಹೊತ್ತೊಯ್ದದಿದ್ದಾರೆ. ನಿತ್ಯ ಸಹಸ್ರಾರು ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆ ಅಂತಾ ಆಗಮಿಸುತ್ತಾರೆ. ಆದರೆ, ವೀಲ್ ಚೇರ್ ಸೇರಿದಂತೆ ಇನ್ನಿತರ ಸೌಲಭ್ಯಗಳು ಬೆರಳಣೆಕೆಯಷ್ಟು ರೋಗಿಗಳಿಗೆ ಮಾತ್ರವೇ ದೊರೆಯುತ್ತದೆ ಎಂಬ ಆರೋಪ ಕೇಳಿ ಬಂದಿದೆ.
ಎರಡು ದಿನದ ಹಿಂದೆ ನಡೆದ ಈ ಘಟನೆ ವಿಡಿಯೋ, ಇದೀಗ ವೈರಲ್ ಆಗಿದ್ದು, ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.