ಕರ್ನಾಟಕ

karnataka

ETV Bharat / state

ಮಾಂಸ ಮಾರ್ಕೆಟ್ ತೆರೆದ್ರೂ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತದ ಸೂಚನೆ..

ಈ ಹಿನ್ನೆಲೆ ಜವಳಗಲ್ಲಿ ಮಾರ್ಕೆಟ್‌ಗೆ ಎಸ್‌ಪಿ ಯತೀಶ್‌ ಎನ್ ಭೇಟಿ ನೀಡಿ ಪರಿಶೀಲಿಸಿದರು. ಮಾಂಸ ಮಾರಾಟ ಮಾಡುವಾಗ ನಿಯಮ ಉಲ್ಲಂಘನೆ ಮಾಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಸೂಚನೆ ನೀಡಿದರು.

By

Published : Apr 3, 2020, 1:17 PM IST

ಗದಗ: ನಗರದಲ್ಲಿ ಇಂದಿನಿಂದ ನಾನ್‌ವೆಜ್ ಮಾರ್ಕೆಟ್‌ ಒಪನ್ ಆಗಿವೆ. ನಗರದ ಜವಳಗಲ್ಲಿಯ ನಾನ್‌ವೆಜ್ ಮಾರ್ಕೆಟ್ ಒಪನ್ ಆಗಿದ್ರೂ ದಿನಕ್ಕೆ ಮೂರು ಗಂಟೆ‌ ಮಾತ್ರ ಮಾರಾಟ ಮಾಡಬೇಕೆಂದು ಡಿಸಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆ ಜವಳಗಲ್ಲಿ ಮಾರ್ಕೆಟ್‌ಗೆ ಎಸ್‌ಪಿ ಯತೀಶ್‌ ಎನ್ ಭೇಟಿ ನೀಡಿ ಪರಿಶೀಲಿಸಿದರು. ಮಾಂಸ ಮಾರಾಟ ಮಾಡುವಾಗ ನಿಯಮ ಉಲ್ಲಂಘನೆ ಮಾಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಸೂಚನೆ ನೀಡಿದರು.

ನಾನ್‌ವೆಜ್ ಮಾರ್ಕೆಟ್ ತೆರೆದ್ರೂ ಅಂತರ ಕಾಯ್ದುಕೊಳ್ಳಿ..

ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ವಾರ್ನ್ ಮಾಡಿದ್ದಾರೆ. ಇಷ್ಟು ದಿನ ನಾನ್‌ವೆಜ್ ಸಿಗದೇ ಕಂಗಾಲಾಗಿದ್ದ ಜನರು ಮಟನ್, ಚಿಕನ್, ಫಿಶ್ ಖರೀದಿಸಲು ಆಗಮಿಸುತ್ತಿದ್ದಾರೆ. ಲಾಕ್‌ಡೌನ್‌ ಬಳಿಕ ಬಿಕೋ ಅಂತಿದ್ದ ಮಟನ್ ಮಾರ್ಕೆಟ್ ಈಗ ಜನಜಂಗುಳಿಯಿಂದ ಕೂಡಿತ್ತು.

ABOUT THE AUTHOR

...view details