ಗದಗ: ಹುಬ್ಬಳ್ಳಿಯ ಮೂರು ಸಾವಿರ ಮಠದ 500 ಕೋಟಿ ರೂ. ಆಸ್ತಿ ಬಿಜೆಪಿ ಮುಖಂಡತ್ವದಲ್ಲಿ ಪರಭಾರೆಯಾಗಿದೆ. ಅದಕ್ಕೆ ಓರ್ವ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಸಾಥ್ ನೀಡಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ಆರೋಪಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಪ್ರಯುಕ್ತವಾಗಿ ಲಕ್ಷ್ಮೇಶ್ವರದಲ್ಲಿ ನಡೆದ ನಿಧಿ ಸಮರ್ಪಣಾ ಅಭಿಯಾನದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಯಾರು ಈ ದೇಶದ ಇತಿಹಾಸ ಸಾರ್ವಜನಿಕ ಮಠ, ಮಂದಿರ, ಆಶ್ರಮಗಳನ್ನು ಉಳಿಸಬೇಕೆಂದು ಹೋಗುತ್ತಾರೋ ಅವರ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಮಕ್ಕಳಿಗೆ ಅನ್ನ ಹಾಕಿ, ವಿದ್ಯೆ ಕೊಟ್ಟ ಮೂರು ಸಾವಿರ ಮಠದ ಆಸ್ತಿ ನಾಶವಾಗಿದೆ. ನನ್ನ ಬಗ್ಗೆ ಕೆಲವರು ತಪ್ಪು ಕಲ್ಪನೆ ಬಿತ್ತರಿಸುತ್ತಿದ್ದಾರೆ ಎಂದು ಕಿಡಿಕಾರಿದರು.