ಗದಗ:ಫಖೀರ್ ದಿಂಗಾಲೇಶ್ವರ ಶ್ರೀ ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ 2 ಕೋಟಿ ರೂ. ಅನುದಾನದಲ್ಲಿ 1.25 ಕೋಟಿ ಹಣ ಗುಳುಂ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಾನು ನೇಮಕಗೊಂಡ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಯಡಿಯೂರಪ್ಪ ಕಾಲದಲ್ಲಿ 2 ಕೋಟಿ ಅನುದಾನವನ್ನು ಬಜೆಟ್ನಲ್ಲಿ ಇಟ್ಟಿದ್ದರು. ಆದ್ರೆ ಅದು ಡಿಸಿಯವರಿಂದ ನೇರವಾಗಿ ಬರಲಿಲ್ಲ ಎಂದು ಹೇಳಿದ್ದಾರೆ.
ಗುತ್ತಿಗೆದಾರರು ಮಠದ ಪೂರ್ಣ ಕೆಲಸ ಮುಗಿಸಿದರೂ ಇದುವರೆಗೆ ಮುಕ್ಕಾಲು ಭಾಗ ಹಣ ಬಂದಿಲ್ಲ. ಕೇವಲ 75 ಲಕ್ಷ ಬಂದಿದೆ. ಉಳಿದ 1.25 ಕೋಟಿ ಹಣ ಎಲ್ಲಿಗೆ ಹೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಆ ಪ್ರತಿಷ್ಠಿತ ಮಠಾಧೀಶರಿಗೆ ಡಿಸಿಯವರಿಂದ ನೇರವಾಗಿ ಹಣ ಹೋಗುವುದಾದರೆ ಶಿರಹಟ್ಟಿ ಮಠಕ್ಕೆ ಈ ಅನ್ಯಾಯ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.