ಗದಗ:ಮುಂಡರಗಿಯ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಶ್ರೀಗಳಿಗೆ ಜೀವಬೆದರಿಕೆ ಪತ್ರ ಬಂದ ಹಿನ್ನೆಲೆ ಕೂಡಲೇ ಶ್ರೀಗಳಿಗೆ ಭದ್ರತೆ ನೀಡುವಂತೆ ತಹಶೀಲ್ದಾರ್ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಿಜಗುಣಾನಂದ ಶ್ರೀಗಳಿಗೆ ಭದ್ರತೆ ನೀಡುವಂತೆ ಭಕ್ತರಿಂದ ಮನವಿ
ನಿಜಗುಣಾನಂದ ಶ್ರೀಗಳಿಗೆ ಜೀವಬೆದರಿಕೆ ಪತ್ರ ಬಂದ ಹಿನ್ನೆಲೆ ಶ್ರೀಗಳಿಗೆ ಭದ್ರತೆ ನೀಡುವಂತೆ ತೋಂಟದಾರ್ಯ ಸೇವಾ ಸಮಿತಿ ಹಾಗೂ ಶ್ರೀ ಮಠದ ಭಕ್ತರು ತಹಶೀಲ್ದಾರ್ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ನಿಜಗುಣಾನಂದ ಶ್ರೀ
ನಿಜಗುಣಾನಂದ ಶ್ರೀಗಳು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ 15 ಜನರನ್ನು ಜನವರಿ 26ರಂದು ಕೊಲೆ ಮಾಡುವುದಾಗಿ ಅನಾಮಿಕರಿಂದ ಬೆದರಿಕೆ ಪತ್ರ ಬಂದಿದ್ದವು. ಈ ಹಿನ್ನೆಲೆಯಲ್ಲಿ ತೋಂಟದಾರ್ಯ ಸೇವಾ ಸಮಿತಿ ಹಾಗೂ ಶ್ರೀ ಮಠದ ಭಕ್ತರು ಶ್ರೀಗಳಿಗೆ ಭದ್ರತೆ ನೀಡಬೇಕು ಹಾಗೂ ಪತ್ರ ಬರೆದವರನ್ನು ಬಂಧಿಸಬೇಕೆಂದು ಮನವಿ ನೀಡಲಾಯಿತು.