ಕರ್ನಾಟಕ

karnataka

ETV Bharat / state

ಕೊರೊನಾದಿಂದ ಗುಣಮುಖವಾಗಿದ್ದ ರೋಣ ಶಿಕ್ಷಕ ಖಿನ್ನತೆಯಿಂದ ಆತ್ಮಹತ್ಯೆ! - depressed teacher committed suicide in gadag,

ಕೊರೊನಾದಿಂದ ಗುಣಮುಖನಾಗಿದ್ದ ಶಿಕ್ಷಕ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಶರಣಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ರೋಣ ಶಿಕ್ಷಕ ಖಿನ್ನತೆಯಿಂದ ಆತ್ಮಹತ್ಯೆ
ರೋಣ ಶಿಕ್ಷಕ ಖಿನ್ನತೆಯಿಂದ ಆತ್ಮಹತ್ಯೆ

By

Published : May 24, 2021, 5:04 PM IST

Updated : May 24, 2021, 5:24 PM IST

ಗದಗ:ಕೊರೊನಾದಿಂದ ಗುಣಮುಖನಾಗಿದ್ದ ಶಿಕ್ಷಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.

ಮಹಾಂತೇಶ್ ಕುದರಿ(33) ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕ. ಇವರು ಕೊರೊನಾ ಬಂದಿದೆ ಮುಂದೆ ಏನಾಗುತ್ತೋ ಎಂಬ ಆತಂಕದಿಂದ ಹಲವು ಬಾರಿ ತಾಯಿ ಹಾಗೂ ಅಣ್ಣನ ಬಳಿ ಮುಂದೆ ಏನಾದರೂ ಆಗಬಹುದಾ ಎಂದು ಮಾತನಾಡಿದ್ದರಂತೆ.

ರಾತ್ರಿ ಊಟದ ನಂತರ ಮಹಡಿ ಮನೆಗೆ ತೆರಳಿ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ನರೇಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓದಿ ಎತ್ತಿನ ಗಾಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಕ್ಕಿ-ಗೋಧಿ ವಿತರಿಸಿದ ಶಿಕ್ಷಕ

Last Updated : May 24, 2021, 5:24 PM IST

ABOUT THE AUTHOR

...view details