ಕರ್ನಾಟಕ

karnataka

ETV Bharat / state

ಮಾಜಿ ಶಾಸಕರ ಹೆಸರಲ್ಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಸಂಬಂಧಿಕರಿಂದ ಆಸ್ತಿ ದೋಖಾ: ಆರೋಪ - ಮುಂಡರಗಿ ಮಾಜಿ ಶಾಸಕ ವಸಂತ ಬಸಪ್ಪ ಬಾವಿ

ಮಾಜಿ ಶಾಸಕರಿಗೆ ಸಂಬಂಧವಿಲ್ಲದ ಮಹಿಳೆ ಗಿರಿಜಾ ಕೊಪ್ಪದ ಎಂಬಾಕೆ, ಕಂದಾಯ ಇಲಾಖೆಯಿಂದ ಮಾಜಿ ಶಾಸಕರ ಪುತ್ರಿ ಎಂದು ವಾರಸಾ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಈ ಸೇವೆಗಾಗಿ ಲಕ್ಷಾಂತರ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

creation-of-death-certificate
ಬದುಕಿರುವ ಮಾಜಿ ಶಾಸಕನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಸೃಷ್ಟಿ

By

Published : Feb 13, 2021, 5:56 PM IST

ಗದಗ:ಮಾಜಿ ಶಾಸಕನ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಸಂಬಂಧಿಕರು ಅವರ ಹೆಸರಿನಲ್ಲಿರುವ ಆಸ್ತಿ ಲೂಟಿ ಮಾಡಲು ಅಧಿಕಾರಿಗಳಿಗೆ ಆಮೀಷ ಒಡ್ಡಿ ತಮ್ಮ ಸ್ವಾರ್ಥ ಈಡೇರಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಾಜಿ ಶಾಸಕನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಸೃಷ್ಟಿ ಆರೋಪ

ಓದಿ:ಕೃಷಿ ಯಂತ್ರೋಪಕರಣಗಳ ಮೇಲೆ ಎಂಆರ್ಪಿ ನಮೂದಾಗಲಿ; ಕನ್ನಡದಲ್ಲೇ ಮನವಿ ಮಾಡಿದ ದೇವೇಂದ್ರಪ್ಪ

ಮುಂಡರಗಿ ಮಾಜಿ ಶಾಸಕ ವಸಂತ ಬಸಪ್ಪ ಬಾವಿ ಮತ್ತು ಇವರ ಪತ್ನಿ ಗಂಗಮ್ಮ ಹೆಸರಿನಲ್ಲಿ ಖೊಟ್ಟಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಕಂದಾಯ ಇಲಾಖೆ ಕೆಲ ಅಧಿಕಾರಿಗಳು, ಕೆಲ ಖಾಸಗಿ ವ್ಯಕ್ತಿಗಳು ಸೇರಿ ಮಾಜಿ ಶಾಸಕರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಲಪಟಾಯಿಸಿದ್ದಾರೆ ಎನ್ನಲಾಗಿದೆ.

ಮಾಜಿ ಶಾಸಕರಿಗೆ ಸಂಬಂಧವಿಲ್ಲದ ಮಹಿಳೆ ಗಿರಿಜಾ ಕೊಪ್ಪದ ಎಂಬಾಕೆ, ಕಂದಾಯ ಇಲಾಖೆಯಿಂದ ಮಾಜಿ ಶಾಸಕರ ಪುತ್ರಿ ಎಂದು ವಾರಸಾ ಪ್ರಮಾಣ ಪತ್ರವನ್ನೂ ಪಡೆದಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಈ ಸೇವೆಗಾಗಿ ಲಕ್ಷಾಂತರ ರೂ. ಲಂಚ ಪಡೆದಿದ್ದಾರೆ. ಮುಂಡರಗಿ ತಾಲೂಕು ಪೇಠಾಲೂರ ಗ್ರಾಮದಲ್ಲಿ ಮಾಜಿ ಶಾಸಕ ವಸಂತ ಬಸಪ್ಪ ಬಾವಿ ರಿ.ಸನಂ 118/2ಎ ಕ್ಷೇತ್ರ, ಒಂದು ಎಕರೆ ಜಮೀನು ಹೊಂದಿದ್ದು, ಅವರು ಕುಟುಂಬದೊಂದಿಗೆ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ.

ಪೇಠಾಲೂರ ಗ್ರಾಮದ ಗಿರಿಜವ್ವ ದೇವೇಂದ್ರಪ್ಪ ಕೊಪ್ಪದ ಮಾಜಿ ಶಾಸಕರ ಪುತ್ರಿಯೆಂದು ತಹಶೀಲ್ದಾರ್ ಕಚೇರಿಗೆ ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ ವಾರಸಾ ಪ್ರಮಾಣ ಪತ್ರವನ್ನು ಪಡೆದು ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರಂತೆ. ಸದ್ಯ ಈ ವಿಷಯ ತಿಳಿದು ಮಾಜಿ ಶಾಸಕ ವಸಂತಪ್ಪ ಬಾವಿಯವರಿಗೆ ದಿಗಿಲು ಬಡಿದಿದೆ. ಈ ಸಂಬಂಧ ವಸಂತಪ್ಪ ಅವರು ವಕೀಲರೊಬ್ಬರನ್ನ ಸಂಪರ್ಕಿಸಿ ದಾವೆ ಹೂಡಿದ್ದಾರೆ.

ಖೊಟ್ಟಿ ಮರಣ ಪ್ರಮಾಣ ಪತ್ರ:

ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಸೇರಿಕೊಂಡು ಮಾಜಿ ಶಾಸಕ ಭಾವಿ 20-12-2014 ರಂದು, ಪತ್ನಿ ಗಂಗವ್ವ ಭಾವಿ ದಿ.12-02-2014 ರಂದು ಪೇಠಾಲೂರ ಗ್ರಾಮದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮರಣ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದಾರೆ. ಇದರಲ್ಲಿ ಆಗಿನ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಅಲಗೇರಿ ಎಂಬುವರು ಇದ್ದಾಗ ಈ ಘಟನೆ ನಡೆದಿರುವುದು ಗೊತ್ತಾಗಿದೆ ಎಂದು ಮುಂಡರಗಿ ತಹಶೀಲ್ದಾರ್ ಆಶ್ಯಪ್ಪ ಪೂಜಾರಿ ತಿಳಿಸಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಗ್ರಾಮ ಲೆಕ್ಕಾಧಿಕಾರಿ ಬೇರೆ ಪ್ರಕರಣವೊಂದರಲ್ಲಿ ಅಮಾನತು ಆಗಿದ್ದಾರೆ. ಈಗ ಮತ್ತೊಮ್ಮೆ ಗಂಭೀರ ಆರೋಪ ಅವರ ಮೇಲೆ ಬಂದಿದೆ. ಹೀಗಾಗಿ ಅವರ ವಿರುದ್ಧ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಸುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ.

ABOUT THE AUTHOR

...view details