ಗದಗ: ಜಮೀನಿನಲ್ಲಿದ್ದ ಶೆಡ್ಗೆ ಬೆಂಕಿ ತಗುಲಿದ ಪರಿಣಾಮ ಹಸುಗಳು ಮೃತಪಟ್ಟಿರುವ ಘಟನೆ ನರಗುಂದ ತಾಲೂಕಿನ ಕಣಕಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗದಗ: ಶೆಡ್ಗೆ ಬೆಂಕಿ ಬಿದ್ದು ಎರಡು ಹಸುಗಳು ಸಾವು - Cows died from fire incident in Gadag
ಬೆಂಕಿ ಅವಘಡದಿಂದ ಹಸುಗಳು ಮೃತಪಟ್ಟ ಘಟನೆ ಗದಗ ಜಿಲ್ಲೆಯ ಕಣಕಿಕೊಪ್ಪ ಗ್ರಾಮದಲ್ಲಿ ನಡೆದಿದೆ.
![ಗದಗ: ಶೆಡ್ಗೆ ಬೆಂಕಿ ಬಿದ್ದು ಎರಡು ಹಸುಗಳು ಸಾವು Cows died from fire incident](https://etvbharatimages.akamaized.net/etvbharat/prod-images/768-512-8264970-thumbnail-3x2-hrs.jpg)
ಬೆಂಕಿ ಅವಘಡದಿಂದ ಮೃತಪಟ್ಟ ಹಸುಗಳು
ಪಡಿಯಪ್ಪ ಕೊಳ್ಳಿ ಎಂಬವರಿಗೆ ಸೇರಿದ ನಾಲ್ಕು ದನಗಳ ಪೈಕಿ ಎರಡು ಹಸುಗಳು ಮೃತಪಟ್ಟಿದ್ದು, ಇನ್ನುಳಿದ ಎರಡು ದನಗಳಿಗೆ ಗಂಭೀರವಾಗಿ ಗಾಯಗೊಂಡಿವೆ. ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಬೆಂಕಿ ಅವಘಡದಿಂದ ಮೃತಪಟ್ಟ ಹಸುಗಳು
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.