ಗದಗ: ನಗರದ ಕೋ ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ಖರೀದಿ ಕೇಂದ್ರದಲ್ಲಿ ಗ್ರೇಡಿಂಗ್ ನೆಪವೊಡ್ಡಿ ರೈತರು ತಂದಿದ್ದ ಹತ್ತಿಯನ್ನು ಖರೀದಿಸದೆ ವಾಪಸ್ ಕಳುಹಿಸಲಗಿದೆ ಎಂದು ರೈತರು ಆರೋಪಿಸಿದ್ದಾರೆ.
ಹತ್ತಿ ಮಾರಲು ಗದಗ ರೈತರ ಪರದಾಟ : ಮನವಿ ಮಾಡಿದರೂ ಕ್ಯಾರೆ ಎನ್ನದ ಜಿಲ್ಲಾಡಳಿತ - cotton
ಕೊರೊನಾ ಬಿಕ್ಕಟ್ಟಿನ ಮಧ್ಯೆ ಹತ್ತಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ತಂದಿದ್ದ ಹತ್ತಿಯನ್ನು ಖರೀದಿಸದೆ ಕೋ ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ಖರೀದಿ ಕೇಂದ್ರ ವಾಪಸ್ ಕಳುಹಿಸಿದೆ.
![ಹತ್ತಿ ಮಾರಲು ಗದಗ ರೈತರ ಪರದಾಟ : ಮನವಿ ಮಾಡಿದರೂ ಕ್ಯಾರೆ ಎನ್ನದ ಜಿಲ್ಲಾಡಳಿತ Cotton growers who got into trouble](https://etvbharatimages.akamaized.net/etvbharat/prod-images/768-512-7395972-237-7395972-1590758199324.jpg)
ಟ್ರ್ಯಾಕ್ಟರ್ನಲ್ಲಿ ಇರುವ ಹತ್ತಿ
ಗದಗ, ನರಗುಂದ ಹಾಗೂ ರೋಣ ತಾಲೂಕಿನ ರೈತರು ತಂದಿದ್ದ ಹತ್ತಿ, ಮೂರು ದಿನಗಳಿಂದ ಟ್ರ್ಯಾಕ್ಟರ್ನಲ್ಲೇ ಇದೆ. ಇತ್ತ ರೈತರು ಅನ್ನ ನೀರಿಲ್ಲದೇ ಪರದಾಡುತ್ತಿರುವ ಸ್ಥಿತಿಯೂ ನಿರ್ಮಾಣವಾಗಿದೆ.
ರೈತರ ಪರದಾಟ
ಈ ಕುರಿತು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಲ್ಲಿ ಮನವಿ ಮಾಡಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ ಎಂದು ಹತ್ತಿ ಬೆಳೆಗಾರರು ಬೇಸರ ವ್ಯಕ್ತಪಡಿಸಿದರು.