ಕರ್ನಾಟಕ

karnataka

ETV Bharat / state

ಗದಗದಲ್ಲಿ ಇಂದು ಹೊಸದಾಗಿ 43 ಜನರ ಮೇಲೆ ನಿಗಾ

ರಾಜ್ಯದಲ್ಲಿ ಕೊರೊನಾ ಭೀತಿ ಕೊಂಚ ಕಡಿಮೆಯಾದಂತಿದೆ. ಇನ್ನು ಗದ​ಗದಲ್ಲಿಂದು ಕೊರೊನಾ ಪಾಸಿಟಿವ್​ ಕಂಡುಬರದಿದ್ದರೂ ಹೊಸದಾಗಿ 43 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾಹಿತಿ ನೀಡಿದ್ದಾರೆ.

Coronation panic: Watch over 43 new people in Gadag
ಕೊರೊನಾ ಭೀತಿ: ಗದಗದಲ್ಲಿ ಇಂದು ಹೊಸದಾಗಿ 43 ಜನರ ಮೇಲೆ ನಿಗಾ

By

Published : Apr 30, 2020, 11:02 PM IST

ಗದಗ:ಗದಗದಲ್ಲಿ ಇಂದು ಮತ್ತೆ ಹೊಸದಾಗಿ 43 ಜನರ ಮೇಲೆ ನಿಗಾವಹಿಸಲಾಗಿದ್ದು ಒಟ್ಟು 1,195 ಜನರ ಮೇಲೆ ನಿಗಾವಹಿಸಲಾಗಿದೆ ಅಂತ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು 28 ದಿನಗಳ ನಿಗಾ ಅವಧಿ ಪೂರೈಸಿದವರು 219 ಜನರಿದ್ದು, ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರು 943 ಜನ ಎಂದಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು 23 ಜನ ಎಂದು ತಿಳಿಸಿದ್ದಾರೆ.

ಇನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿಗಳು 1,174, ಇದರಲ್ಲಿ ಇಂದು ಹೊಸದಾಗಿ 41 ಸೇರಿವೆ. ಒಟ್ಟು 1,008 ವರದಿಗಳು ನೆಗೆಟಿವ್ ಆಗಿದ್ದು, 55 ವರದಿಗಳು ತಿರಸ್ಕರಿಸಿಲ್ಪಟ್ಟಿವೆ ಎಂದಿದ್ದಾರೆ. ‌ಇನ್ನು 106 ವರದಿಗಳು ಬಾಕಿ ಇವೆ. ಅಲ್ಲದೇ ಜಿಲ್ಲೆಯಲ್ಲಿ ಪಿ-166 , ಪಿ-304, ಪಿ-370, ಪಿ-396, ಪಿ-514 ಒಟ್ಟು 5 ಕೊವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದಿದ್ದಾರೆ.

ABOUT THE AUTHOR

...view details