ಗದಗ: ನಗರದ ರಂಗನವಾಡಿ ಗಲ್ಲಿಯಲ್ಲಿ ಕೊರೊನಾ ಶಂಕಿತ ವೃದ್ಧೆ ಪತ್ತೆಯಾಗಿದ್ದು, ಈ ಗಲ್ಲಿಯನ್ನ ನಿಷೇಧಿತ ಪ್ರದೇಶ ಅಂತ ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ.
ಗದಗದ ರಂಗನವಾಡಿ ಗಲ್ಲಿಯಲ್ಲಿ ಕೊರೊನಾ ಶಂಕಿತ ವೃದ್ಧೆ ಪತ್ತೆ! - Corona suspect
ಗದಗ ನಗರದ ರಂಗನವಾಡಿ ಗಲ್ಲಿಯಲ್ಲಿ ಕೊರೊನಾ ಶಂಕಿತ ವೃದ್ಧೆ ಪತ್ತೆಯಾಗಿದ್ದು, ಗಲ್ಲಿಯಲ್ಲಿ ಹೈ ಅಲರ್ಟ್ ಮಾಡಲಾಗಿದೆ.
![ಗದಗದ ರಂಗನವಾಡಿ ಗಲ್ಲಿಯಲ್ಲಿ ಕೊರೊನಾ ಶಂಕಿತ ವೃದ್ಧೆ ಪತ್ತೆ! Corona suspect found in Ranganawadi gully, Gadag](https://etvbharatimages.akamaized.net/etvbharat/prod-images/768-512-6686770-1022-6686770-1586176033085.jpg)
ಗದಗದ ರಂಗನವಾಡಿ ಗಲ್ಲಿಯಲ್ಲಿ ಕೊರೊನಾ ಶಂಕಿತ ವೃದ್ಧೆ ಪತ್ತೆ...!
ದತ್ತಾತ್ರೇಯ ರಸ್ತೆಯ ರಂಗನವಾಡಿ ಗಲ್ಲಿಯಲ್ಲಿ ಹೈ ಅಲರ್ಟ್ ಮಾಡಲಾಗಿದ್ದು, 200 ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಹಾಕಿ ಎಲ್ಲಾ ರಸ್ತೆಗಳನ್ನ ಬಂದ್ ಮಾಡಲಾಗಿದೆ. ಒಳಗೆ ಬರೋ ಹಾಗಿಲ್ಲ. ಹೊರಗೆ ಹೋಗೋ ಹಾಗಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಇನ್ನು ವೃದ್ಧೆ ಏಪ್ರಿಲ್ 4ರಂದು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಗಂಟಲಿನ ದ್ರವವನ್ನ ತಪಾಸಣೆಗೆ ರವಾನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.