ಗದಗ:ಜಿಲ್ಲೆಯಲ್ಲಿಂದು ಮತ್ತೆ ಆರು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 243ಕ್ಕೆ ಏರಿಕೆಯಾಗಿದೆ.
ಗದಗ ಜಿಲ್ಲೆಯಲ್ಲಿಂದು ಮತ್ತೆ ಆರು ಜನರಿಗೆ ತಗುಲಿದ ಕೊರೊನಾ - gadag news
ಗದಗ ಜಿಲ್ಲೆಯಲ್ಲಿಂದು ಮತ್ತೆ ಆರು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಹರ್ತಿ ಗ್ರಾಮದ ನಿವಾಸಿ 22 ವರ್ಷದ ಸೋಂಕಿತ ಮಹಿಳೆ (ಪಿ-18287) ಸಂಪರ್ಕದಿಂದಾಗಿ ರಾಜೀವ್ ಗಾಂಧಿ ನಗರದ ನಿವಾಸಿ 23 ವರ್ಷದ ಮಹಿಳೆಗೆ (ಪಿ-28939) ಸೋಂಕು ದೃಢಪಟ್ಟಿದೆ. ಗದಗ-ಬೆಟಗೇರಿ ನಗರದ ಡಿಸಿ ಮಿಲ್ ಪ್ರದೇಶದ ನಿವಾಸಿ 53 ವರ್ಷದ ಸೋಂಕಿತ ಮಹಿಳೆ (ಪಿ-25320) ಸಂಪರ್ಕದಿಂದಾಗಿ ಎಸ್.ಎಂ.ಕೃಷ್ಣ ನಗರದ ನಿವಾಸಿ 47 ವರ್ಷದ ಪುರುಷ (ಪಿ-28941), ಡಿಸಿ ಮಿಲ್ ಪ್ರದೇಶದ 32 ವರ್ಷದ ಮಹಿಳೆ (ಪಿ-28942) ಹಾಗೂ ಶಿವಾಜಿ ನಗರದ ನಿವಾಸಿ 35 ವರ್ಷದ ಮಹಿಳೆಗೆ (ಪಿ-28943) ಸೋಂಕು ದೃಢಪಟ್ಟಿದೆ. ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ ದಾಸರ ಓಣಿ ನಿವಾಸಿ 24 ವರ್ಷದ ಮಹಿಳೆ (ಪಿ-28940) ಹಾಗೂ ಮುಳಗುಂದ ಪಟ್ಟಣದ ನಿವಾಸಿ 40 ವರ್ಷದ ಮಹಿಳೆಗೂ (ಪಿ-28944) ಕೂಡ ಸೋಂಕು ದೃಡಪಟ್ಟಿದ್ದು, ಸೋಂಕಿನ ಮೂಲ ಪತ್ತೆ ಮಾಡಲಾಗುತ್ತಿದೆ.
ಸೋಂಕಿತರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ. 243 ಸೋಂಕಿತರ ಪೈಕಿ 165 ಜನ ಗುಣಮುಖರಾಗಿದ್ದು, 74 ಸಕ್ರಿಯ ಪ್ರಕರಣಗಳಿವೆ.