ಕರ್ನಾಟಕ

karnataka

ETV Bharat / state

ಗದಗ ಜಿಲ್ಲೆಯಲ್ಲಿಂದು 6 ಜನರಿಗೆ ಕೊರೊನಾ... ಓರ್ವ ಸಾವು - Gadag Corona infected

ಗದಗ ಜಿಲ್ಲೆಯಲ್ಲಿಂದು 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಓರ್ವ ಸೋಂಕಿತ ಕೊರೊನಾಗೆ ಬಲಿಯಾಗಿದ್ದಾನೆ. ಗದಗ ಜಿಲ್ಲೆಯಲ್ಲಿಂದು 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಓರ್ವ ಸೋಂಕಿತ ಕೊರೊನಾಗೆ ಬಲಿಯಾಗಿದ್ದಾನೆ.

Corona Positive for 6 people in Gadag District
ಗದಗ ಜಿಲ್ಲೆಯಲ್ಲಿಂದು 6 ಜನರಿಗೆ ಕೊರೊನಾ..ಓರ್ವ ಸಾವು

By

Published : Jul 13, 2020, 10:49 PM IST

ಗದಗ: ಜಿಲ್ಲೆಯಲ್ಲಿಂದು 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 322ಕ್ಕೆ ಏರಿಕೆಯಾಗಿದೆ.

ರೋಣ ತಾಲ್ಲೂಕಿನ ಹುಲ್ಲೂರು ಗ್ರಾಮದ ನಿವಾಸಿ 26 ವರ್ಷದ ಪುರುಷನಿಗೆ (ಪಿ-38890) ಸೋಂಕು ದೃಢಪಟ್ಟಿದ್ದು, ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಜಿಮ್ಸ್ ಆಸ್ಪತ್ರೆಯ 22 ವರ್ಷದ ಮಹಿಳೆ (ಪಿ-38892) ಹಾಗೂ ಕಳಸಾಪುರ ರಸ್ತೆಯ ಬ್ಲೂಸ್ಟಾರ್ ಬಜಾರ್ ಹತ್ತಿರದ ನಿವಾಸಿ 59 ವರ್ಷದ ಮಹಿಳೆಗೆ (ಪಿ-38894) ಕೆಮ್ಮು, ಜ್ವರ ರೋಗ ಲಕ್ಷಣದಿಂದಾಗಿ ಸೋಂಕು ದೃಢಪಟ್ಟಿದೆ.

ಗದಗ-ಬೆಟಗೇರಿ ಭಜಂತ್ರಿ ಓಣಿಯ 31 ವರ್ಷದ ಪುರುಷನಿಗೆ (ಪಿ-38896 ) ಹಾಗೂ ಹುಡ್ಕೋ ಕಾಲೋನಿ ನಿವಾಸಿ 14 ವರ್ಷದ ಯುವಕನಿಗೆ ಸೋಂಕಿತರ ಸಂಪರ್ಕದಿಂದಾಗಿ ದೃಢಪಟ್ಟಿದೆ. ನರಗುಂದ ತಾಲ್ಲೂಕಿನ ದಂಡಾಪುರದ ನಿವಾಸಿ 24 ವರ್ಷದ ಪುರುಷನಿಗೆ (ಪಿ-38900) ಬೆಂಗಳೂರು ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಜಿಲ್ಲೆಯಲ್ಲಿಂದು ಐವರು ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಓರ್ವ ಸೋಂಕಿತ ಕೊರೊನಾಗೆ ಬಲಿಯಾಗಿದ್ದಾನೆ. ಸದ್ಯ, 134 ಸಕ್ರಿಯ ಪ್ರಕರಣಗಳಿದ್ದು, ಜಿಮ್ಸ್​ನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details