ಗದಗ: ಕೊರೊನಾ ಪಾಸಿಟಿವ್ ಪ್ರಕರಣ ದೃಢವಾದ ಹಿನ್ನೆಲೆ ಗದಗನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, 284 ಜನರ ಮೇಲೆ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.
ಗದಗನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದೃಢ: ಜಿಲ್ಲಾದ್ಯಂತ ಹೈ ಅಲರ್ಟ್ - ಗದಗನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದೃಢ
ಗದಗದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದೃಢವಾದ ಹಿನ್ನೆಲೆ ಹೈ ಅಲರ್ಟ್ ಘೋಷಿಸಲಾಗಿದ್ದು, 284 ಜನರ ಮೇಲೆ ಜಿಲ್ಲಾಡಳಿತ ನಿಗಾವಹಿಸಿದೆ.
![ಗದಗನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದೃಢ: ಜಿಲ್ಲಾದ್ಯಂತ ಹೈ ಅಲರ್ಟ್ D C . M.G Hiremath](https://etvbharatimages.akamaized.net/etvbharat/prod-images/768-512-6703076-337-6703076-1586273489136.jpg)
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, ಇಂದು ಹೊಸದಾಗಿ ಒಟ್ಟು 39 ಜನರನ್ನ ಸೇರಿಸಲಾಗಿದೆ. 71 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. ಅಲ್ಲದೇ ಮನೆಯಲ್ಲಿಯೇ ಪ್ರತ್ಯೇಕವಾಗಿ 171 ಜನರ ಮೇಲೆ ನಿಗಾ ಇರಿಸಲಾಗಿದೆ. ಇಂದು 7 ಜನರನ್ನು ಸೇರಿ 42 ಜನರು ಆಸ್ಪತ್ರೆಯಲ್ಲಿ ನಿಗಾವಹಿಸಲಾಗಿದೆ. ಜೊತೆಗೆ ಇಂದಿನ 34 ಜನರನ್ನ ಸೇರಿ 132 ಜನರ ರಕ್ತ ಮಾದರಿ ಪರೀಕ್ಷೆಗಾಗಿ ಕಳಹಿಲಾಗಿದೆ. ಇದರಲ್ಲಿ ಇಂದಿನ 40 ಜನರ ಮಾದರಿ ಸೇರಿ 82 ಜನರ ರಕ್ತ ಪರೀಕ್ಷೆ ಮಾದರಿಗಳು ನಕಾರಾತ್ಮಕವಾಗಿವೆ (ನೆಗೇಟಿವ್) ಬಂದಿವೆ ಎಂದು ತಿಳಿಸಿದ್ದಾರೆ.
ಅಲ್ಲದೇ ಇಂದು ಹೊಸದಾಗಿ 49 ಜನರ ರಕ್ತ ಪರೀಕ್ಷೆ ಮಾದರಿ ವರದಿಗಳು ಬಾಕಿ ಇವೆ ಎಂದು ತಿಳಿಸಿದ್ದಾರೆ.