ಕರ್ನಾಟಕ

karnataka

ETV Bharat / state

ಜಿಮ್ಸ್​ ಎಡವಟ್ಟು: ಗಂಟೆಗಟ್ಟಲೇ ಲಿಫ್ಟ್​ನಲ್ಲೇ ಇತ್ತು ಕೊರೊನಾ ಸೋಂಕಿತನ ಶವ! - Corona infected deadbody in Lift at Gadag

ಆಸ್ಪತ್ರೆಗೆ ಬಂದ ರೋಗಿಗಳು ಮತ್ತು ಸಂಬಂಧಿಕರು, ಉಳಿದ ಸಿಬ್ಬಂದಿ ಕೋವಿಡ್ ರೋಗಿಯ ಶವದಿಂದ ಆತಂಕಕ್ಕೆ ಒಳಗಾಗಿದ್ದರು. ಜಿಮ್ಸ್ ಆಸ್ಪತ್ರೆಯಲ್ಲಿ ಹೀಗೆ ಅನೇಕ ಬಾರಿ ಹಲವು ಎಡವಟ್ಟು ಉಂಟಾಗಿವೆ. ಈಗ ಆ್ಯಂಬುಲೆನ್ಸ್ ಸಹ ಇಲ್ಲದೆ ಶವವನ್ನ ಲಿಫ್ಟ್​ನಲ್ಲಿಯೇ ಬಿಟ್ಟಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಲಿಫ್ಟ್​ನಲ್ಲೇ ಇದ್ದ ಕೊರೊನಾ ಸೋಂಕಿತನ ಶವ
ಲಿಫ್ಟ್​ನಲ್ಲೇ ಇದ್ದ ಕೊರೊನಾ ಸೋಂಕಿತನ ಶವ

By

Published : Aug 24, 2020, 9:59 PM IST

ಗದಗ: ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೇ ಹಲವು ಗಂಟೆಗಳ ಕಾಲ ಲಿಫ್ಟ್​ನಲ್ಲಿ ಕೋವಿಡ್ ಸೋಂಕಿತನ ಶವ ಬಿಟ್ಟ ಕಾರಣ ಆತಂಕ ಸೃಷ್ಟಿಯಾದ ಘಟನೆ ಜಿ‌ಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಕೋವಿಡ್ ನಿಂದ ಬಳಲುತ್ತಿದ್ದ ರೋಗಿಯೊಬ್ಬರು ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಆದರೆ ಸಿಬ್ಬಂದಿಯು ಈ ಮೃತದೇಹವನ್ನ ಲಿಫ್ಟ್ ನಲ್ಲಿ ತಂದು ಆ್ಯಂಬುಲೆನ್ಸ್ ಮೂಲಕ ಸಾಗಿಸಲು ಮುಂದಾಗಿದ್ದರು. ಈ ವೇಳೆ ಸಕಾಲಕ್ಕೆ ಆ್ಯಂಬುಲೆನ್ಸ್ ಬರದ ಕಾರಣ ಶವವನ್ನು ಎರಡು-ಮೂರು ಗಂಟೆ ಲಿಫ್ಟ್ ನಲ್ಲಿ ಇಡಲಾಗಿತ್ತು.

ಆಸ್ಪತ್ರೆಗೆ ಬಂದ ರೋಗಿಗಳು ಮತ್ತು ಸಂಬಂಧಿಕರು, ಉಳಿದ ಸಿಬ್ಬಂದಿ ಕೋವಿಡ್ ರೋಗಿಯ ಶವದಿಂದ ಆತಂಕಕ್ಕೆ ಒಳಗಾಗಿದ್ದರು. ಜಿಮ್ಸ್ ಆಸ್ಪತ್ರೆಯಲ್ಲಿ ಹೀಗೆ ಅನೇಕ ಬಾರಿ ಹಲವು ಎಡವಟ್ಟು ಉಂಟಾಗಿವೆ. ಈಗ ಆ್ಯಂಬುಲೆನ್ಸ್ ಸಹ ಇಲ್ಲದೆ ಶವವನ್ನ ಲಿಫ್ಟ್​ನಲ್ಲಿಯೇ ಬಿಟ್ಟಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details