ಕರ್ನಾಟಕ

karnataka

ETV Bharat / state

ಗದಗ: ನವಜಾತ ಶಿಶುವಿಗೂ ಕೊರೊನಾ, ಜಿಲ್ಲೆಯಲ್ಲಿ 87 ಮಕ್ಕಳಿಗೆ ಸೋಂಕು - Infection in four pregnant women at gadag

ಗದಗದಲ್ಲಿ ಒಂದು ದಿನದ ನವಜಾತ ಶಿಶುವಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 87 ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಎಲ್ಲಾ ಮಕ್ಕಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.

Corona found in a newborn baby
ಮಕ್ಕಳಿಗೆ ವಕ್ಕರಿಸಿದ ಸೋಂಕು

By

Published : Jan 18, 2022, 8:24 PM IST

ಗದಗ:ಒಂದು ದಿನದ ನವಜಾತ ಶಿಶು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 87 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿಎಚ್​​ಓ ಜಗದೀಶ್ ನುಚ್ಚಿನ ತಿಳಿಸಿದರು.

ಜಿಲ್ಲೆಯಲ್ಲಿ ನಾಲ್ವರು ಗರ್ಭಿಣಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಗದಗ ಹಾಗೂ ರೋಣ ಪಟ್ಟಣದ ತಲಾ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.


ಸೋಂಕಿತ ಮಗುವಿನ ತಾಯಿಗೆ ನೆಗೆಟಿವ್ ಇದ್ದು, ಮಗುವಿಗೆ ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿ 4 ವರ್ಷದ ಮಗು, 11 ವರ್ಷದ ಮಗುವಿಗೂ ಕೊರೊನಾ ಸೋಂಕು ತಗುಲಿದ್ದು, ಉಳಿದಂತೆ 84 ಮಕ್ಕಳು 11 ವರ್ಷ ಮೇಲ್ಪಟ್ಟವರಾಗಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಆತಂಕಪಡುವ ಅಗತ್ಯ ಇಲ್ಲಾ ಎಂದು ಡಿಹೆಚ್​​ಓ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್‌ ಸಾವಿನ ಸಂಖ್ಯೆ ಏರಿಕೆ: 'ಡೆತ್ ಆಡಿಟ್' ಮಾಡಲು ಮುಂದಾದ ಸರ್ಕಾರ

ಎರಡನೇ ಅಲೆ ವೇಳೆಯಲ್ಲಿ ಶೇ.9ರಷ್ಟು ಮಕ್ಕಳಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿತ್ತು. ಆದರೆ 3ನೇ ಅಲೆಯಲ್ಲಿ ಇದು ದ್ವಿಗುಣವಾಗಿದೆ. ಇನ್ನು ಶೇ.95 ರಷ್ಟು ಸೋಂಕಿತರು ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

For All Latest Updates

TAGGED:

ABOUT THE AUTHOR

...view details