ಕರ್ನಾಟಕ

karnataka

ETV Bharat / state

ಗದಗ: ಕೊರೊನಾಗೆ ಹೆದರಿ ನಾಲ್ಕನೇ ಮಹಡಿಯಿಂದ ಜಿಗಿದು ಬಾರ್​ ಸಪ್ಲೇಯರ್​ ಆತ್ಮಹತ್ಯೆ

ಗದಗನಲ್ಲಿ ಕೊರೊನಾಗೆ ವ್ಯಕ್ತಿಯೋರ್ವ ಹೆದರಿ ಆಸ್ಪತ್ರೆಯ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡೊಕೊಂಡಿದ್ದಾನೆ.

Man suicide
ವ್ಯಕ್ತಿ ಆತ್ಮಹತ್ಯೆ

By

Published : Sep 4, 2020, 8:02 PM IST

ಗದಗ:ಕೊರೊನಾ ಸೋಂಕಿಗೆ ಹೆದರಿ ಆಸ್ಪತ್ರೆ ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನಲ್ಲಿ ನಡೆದಿದೆ.

40 ವರ್ಷದ ಬಸವರಾಜ್ ಈಳಗೇರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ‌. ಈತ ಗದಗ ತಾಲೂಕಿನ ಮಲ್ಲಸಮುದ್ರ ಬಳಿ ಇರುವ 4 ಅಂತಸ್ತಿನ ಜಿಮ್ಸ್ ಆಸ್ಪತ್ರೆಯ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ವ್ಯಕ್ತಿಯಾಗಿದ್ದು, ಕೊರೊನಾ ಸೋಂಕಿನ ಲಕ್ಷಣಗಳಿದ್ದ ಹಿನ್ನಲೆ ನಿನ್ನೆ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಸ್ಟ್ಯಾಬ್ ಟೆಸ್ಟ್ ಮಾಡಿಸಿದ್ದ, ಹೀಗಾಗಿ ಸ್ವ್ಯಾಬ್​ ಟೆಸ್ಟ್ ನಲ್ಲಿ ಪಾಸಿಟಿವ್​ ಎಂದು ವರದಿ ಬಂದಿತ್ತು. ಆದರೆ ಭಯದಿಂದ ರಾತ್ರಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊರೊನಾಗೆ ಹೆದರಿ ವ್ಯಕ್ತಿ ಆತ್ಮಹತ್ಯೆ

ಇನ್ನು ಬಸವರಾಜ್ ಗದಗ ನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಸುಮಾರು 20 ವರ್ಷಗಳಿಂದ ವೇಯ್ಟರ್​ ಆಗಿ ಕೆಲಸ ಮಾಡುತ್ತಿದ್ದ. ಮೂವರು ಮಕ್ಕಳು ಹಾಗೂ ಹೆಂಡತಿಯ ಜೊತೆ ನೆಮ್ಮದಿ ಜೀವನ ಸಾಗಿಸುತ್ತಿದ್ದ. ಸುಮಾರು 20 ವರ್ಷಗಳ ಹಿಂದೆ ಆತನಿಗೆ ಹಾರ್ಟ್ ಆಪರೇಷನ್ ಸಹ ಆಗಿ ಆತ ಆರಾಮಾಗಿ ಇದ್ದ. ಆದರೆ ಕೆಲ ದಿನಗಳ ಹಿಂದೆ ಆತನಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ನೆಗಡಿ, ಉಸಿರಾಟದ ತೊಂದರೆ ಸಮಸ್ಯೆ ಎದುರಾಗಿತ್ತು. ಆದರೆ ನಿನ್ನೆ ಸ್ವ್ಯಾಬ್ ಟೆಸ್ಟ್ ಪರೀಕ್ಷೆಯಲ್ಲಿ ಪಾಸಿಟಿವ್ ಅಂತ ವರದಿ ಬಂದಿದೆ. ಆ ಹಿನ್ನೆಲೆ ಆತನಿಗೆ ವೈದ್ಯರು ಚಿಕಿತ್ಸೆಯನ್ನೂ ಸಹ ನೀಡಿ ಆಡ್ಮಿಟ್ ಆಗೋದಕ್ಕೆ ಹೇಳಿದ್ದಾರೆ. ಆದರೆ ರಾತ್ರಿ ಯಾರೂ ಇಲ್ಲದ ವೇಳೆ ಆಸ್ಪತ್ರೆಯ ಕಟ್ಟಡದ ಕೊನೆ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ABOUT THE AUTHOR

...view details