ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್​ : ಹತ್ತಿ ಬೆಳೆಗಿಲ್ಲ ಸೂಕ್ತ ಬೆಲೆ, ಸಂಕಷ್ಟದಲ್ಲಿ ಗದಗ ರೈತರು - Cotton crop

ಕೊರೊನಾ ಸೃಷ್ಟಿಮಾಡಿರುವ ಅವಾಂತರ ಅಷ್ಟಿಷ್ಟಲ್ಲ. ರೈತ ವರ್ಗದವರಿಗೀಗ ತಾವು ಬೆಳೆದ ಬೆಳೆಗೆ ಲಾಭ ಸಿಗುವುದಿರಲಿ, ಅಸಲು ಕೂಡಾ ಇಲ್ಲದಂತಾಗಿದೆ. ಸಾಲ ಸೂಲ ಮಾಡಿ ಕಷ್ಟಪಟ್ಟು ಬೆಳೆದಿರುವ ಹತ್ತಿ ಬೆಳೆಯನ್ನು ದೂರದ ಊರುಗಳಿಂದ ಟ್ರ್ಯಾಕ್ಟರ್ ಮೂಲಕ ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಬಂದರೆ ಅಲ್ಲಿ ಸೂಕ್ತ ಬೆಲೆಯೂ ಸಿಗದೆ, ಬೆಳೆಯನ್ನು ರಿಜೆಕ್ಟ್​ ಮಾಡಿರುವ ಪರಿಣಾಮ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Corona effects on Cotton crop
ಕೊರೊನಾ ಸಂಕಷ್ಟ: ಹತ್ತಿ ಬೆಳೆಗಿಲ್ಲ ಸೂಕ್ತ ಬೆಲೆ

By

Published : May 30, 2020, 4:17 PM IST

ಗದಗ: ಕೊರೊನಾ ಸಂಕಷ್ಟಕ್ಕೆ ರೈತರು ತತ್ತರಿಸಿ ಹೋಗಿದ್ದು, ಇದೀಗ ಜಿಲ್ಲೆಯ ರೈತರು ತಾವು ಬೆಳೆದ ಹತ್ತಿ ಬೆಳೆಯನ್ನು ಖರೀದಿಸಿ ಎಂದು ಖರೀದಿ‌ ಕೇಂದ್ರದಲ್ಲಿ ಕೋರಿಕೊಳ್ಳುತ್ತಿದ್ದಾರೆ.

ಕೊರೊನಾ ಭೀತಿ ಮಧ್ಯೆಯೂ ಉತ್ತರ ಕರ್ನಾಟಕದ ರೈತರು ಹತ್ತಿ ಬೆಳೆಯನ್ನ ಬೆಳೆದಿದ್ದಾರೆ. ಸಾಲ ಸೂಲ ಮಾಡಿ ಕಷ್ಟಪಟ್ಟು ಬೆಳೆದ ಹತ್ತಿ ಬೆಳೆಯನ್ನು ದೂರದ ಊರುಗಳಿಂದ ಟ್ರ್ಯಾಕ್ಟರ್ ಮೂಲಕ ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಬಂದಿದ್ದಾರೆ. ಆದರೆ ಖರೀದಿ‌ ಕೇಂದ್ರದಲ್ಲಿರುವ ಅಧಿಕಾರಿ ವರ್ಗ ಮಾತ್ರ ಏನೋ ಗೋಲ್​ಮಾಲ್ ಮಾಡುತ್ತಿದ್ದಾರೆ ಎಂದು ಹತ್ತಿ ಬೆಳೆಗಾರರು ಆರೋಪಿಸುತ್ತಿದ್ದಾರೆ.

ನಾವು ಬೆಳೆದ ಹತ್ತಿಗೆ ಗ್ರೇಡ್ ನೀಡುತ್ತಿಲ್ಲ, ಬೆಳೆ ಖರೀದಿಗೆ ಯೋಗ್ಯವಲ್ಲ ಅಂತ ರಿಜೆಕ್ಟ್ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಹೀಗಾದರೆ‌ ನಾವು ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನು ಏನು ಮಾಡುವುದೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹತ್ತಿ ಬೆಳೆಗಿಲ್ಲ ಸೂಕ್ತ ಬೆಲೆ, ರೈತರ ಆಕ್ರೋಶ

ಇತ್ತ ಖರೀದಿ ಕೇಂದ್ರದ ಅಧಿಕಾರಿಗಳು, ರೈತರು ಬೆಳೆದಿರುವ ಬೆಳೆಯ ಯೋಗ್ಯತೆ‌ಯನುಸಾರ ಖರೀದಿ ಮಾಡುತ್ತೇವೆ. ಮಳೆ ಹಾಗೂ ಬಿಸಿಲಿನ ಪರಿಣಾಮ ಯೋಗ್ಯವಲ್ಲದ ಬೆಳೆಯನ್ನ ಖರೀದಿ ಮಾಡಲು ಬರುವುದಿಲ್ಲ ಎಂದು ಸಬೂಬು ನೀಡುತ್ತಿದ್ದಾರೆಂದು ರೈತರು ತಿಳಿಸಿದ್ದಾರೆ.

ರೈತರಿಗೆ ಸರ್ಕಾರ‌ ನಿಗದಿ ಮಾಡಿರುವ ದರಕ್ಕಾದರೂ ತಮ್ಮ ಬೆಳೆ ಮಾರಾಟವಾಗುತ್ತೆ ಎಂದು ಕಾದು ಕುಳಿತಿದ್ದ ರೈತರಿಗೀಗ ನಿರಾಸೆಯಾಗಿದೆ. ಕ್ವಿಂಟಾಲ್​​ಗೆ ಸರ್ಕಾರದ ಬೆಂಬಲ ಬೆಲೆ 5,550/- ರೂ. ಇದ್ದು ಕನಿಷ್ಟ 5,110 ರೂ. ಗಳಿಗಾದರು ಬೆಳೆಯನ್ನು ತೆಗೆದುಕೊಳ್ಳಲಿ ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಮೂರು ದಿನಗಳಿಂದ ರಾತ್ರಿ ಹಗಲೆನ್ನೆದೆ ರೈತರು ಬಾಡಿಗೆ ಟ್ರ್ಯಾಕ್ಟರ್ ಮಾಡಿಕೊಂಡು ಖರೀದಿ ಕೆಂದ್ರದಲ್ಲಿ ಕಾಯುತ್ತಿದ್ದು, ಅಧಿಕಾರಿಗಳು ಮಾತ್ರ ರೈತರ ಸಮಸ್ಯೆಗೆ‌ ಸ್ಪಂದಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

...view details