ಗದಗ: ಕೊರೊನಾ ಎಫೆಕ್ಟ್ನಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದೆ. ಜಿಲ್ಲೆಯ ಚಮ್ಮಾರರಿಗೂ ಇದರ ಕಹಿ ಅನುಭವ ಆಗಿದೆ.
ಲಾಕ್ಡೌನ್ ಎಫೆಕ್ಟ್... ತುತ್ತಿನ ಚೀಲ ತುಂಬಿಸಿಕೊಳ್ಳಲು ಮನೆ ಮನೆಗೆ ತೆರಳಿ ಚಮ್ಮಾರರ ಕಾಯಕ! - corona effect in gadaga
ಗದಗ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆ ಜಿಲ್ಲೆಯನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಇದರಿಂದ ದಿನದ ಕೆಲಸವನ್ನು ನಂಬಿಕೊಂಡಿದ್ದ ಚಮ್ಮಾರರ ಬದುಕು ಈಗ ಅತಂತ್ರವಾಗಿದೆ.
ಗದಗದಲ್ಲಿ ಕೊರೊನಾ
ಹೌದು, ಚಮ್ಮಾರರ ಬದುಕು ಸಹ ಅತಂತ್ರವಾಗಿದೆ. ಬೀದಿ ಪಕ್ಕದಲ್ಲಿ ಮುರುಕು ಕೊಡೆಯ ಕೆಳಗೆ ಪಾದರಕ್ಷೆ ಹೊಲೆಯುವ ಕೈಗಳಿಗೆ ಈಗ ಕೊರೊನಾ ಲಾಕ್ಡೌನ್ ಬಿಸಿ ತಟ್ಟಿದೆ. ಪರಿಣಾಮ ನೂರಾರು ಜನರ ಬದುಕು ಈಗ ಮೂರಾಬಟ್ಟೆಯಾಗಿದೆ. ಸಂತೆ, ಬಜಾರ್ಗಳಿಗೆ ಬ್ರೇಕ್ ಬಿದ್ದಿದ್ದರಿಂದ ಚಮ್ಮಾರರು ಹೊಟ್ಟೆಪಾಡಿಗೆ ಪಡಬಾರದ ಕಷ್ಟಪಡುತ್ತಿದ್ದಾರೆ.
ಇದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಮನೆ ಮನೆಗೆ ತೆರಳಿ ಚಪ್ಪಲಿ ರಿಪೇರಿ ಮಾಡಲು ಮುಂದಾಗಿದ್ದಾರೆ. ಕುರಿಗಾಹಿಗಳಿಗೆ ರೈತರಿಗೆ ಚಪ್ಪಲಿ ತಯಾರಿಸುತ್ತಿದ್ದ ಈ ಕುಟುಂಬಗಳು ಕೆಲಸವಿಲ್ಲದೆ ಬದುಕು ನಡೆಸಲು ಪರದಾಡುತ್ತಿದ್ದಾರೆ.