ಗದಗ: ಮುಂದಿನ ತಿಂಗಳು 17 ನೇ ತಾರೀಕು ನಡೆಯಬೇಕಿದ್ದ ಐತಿಹಾಸಿಕ ಕಲ್ಲಾಪುರ ಬಸವಣ್ಣನ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.
ಐತಿಹಾಸಿಕ ಕಲ್ಲಾಪುರ ಬಸವೇಶ್ವರ ಜಾತ್ರೆ ರದ್ದು
ಉತ್ತರ ಕರ್ನಾಟಕ ಭಾಗದ ರೈತರು ಶ್ರಾವಣ ಮಾಸದಲ್ಲಿ ಅತಿ ಶ್ರದ್ಧೆ ಭಕ್ತಿಯಿಂದ ಆಚರಿಸುವ ಉತ್ಸವ ಅಂದ್ರೆ ಅದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲ್ಲಾಪುರದಲ್ಲಿ ನಡೆಯುವ ಬಸವೇಶ್ವರ ಜಾತ್ರೆ. ಕೊರೊನಾ ಹಾವಳಿ ಹಿನ್ನೆಲೆ ಶತ ಶತಮಾನಗಳಿಂದಲೂ ನಡೆದು ಬಂದಿರುವ ಈ ಬಾರಿಯ ಜಾತ್ರೆಯನ್ನು ರದ್ದು ಮಾಡಲಾಗಿದೆ.

ಶ್ರಾವಣ ಮಾಸ ಬಂತು ಅಂದ್ರೆ ರೈತಾಪಿ ವರ್ಗ ಮಾಸ ಮುಗಿಯುವವರೆಗೂ ಪೂಜೆ ಪುನಸ್ಕಾರಗಳಲ್ಲಿ ತೊಡಗಿರುತ್ತಾರೆ. ಶ್ರಾವಣ ಮಾಸದ ಪ್ರತಿ ಸೋಮವಾರ ರೈತರು ಬಸವಣ್ಣನ ಗುಡಿಗೆ ಎತ್ತುಗಳನ್ನು ಕರೆದುಕೊಂಡುಹೋಗಿ ಈಡುಗಾಯಿ ಒಡೆದು ಕರ್ಪೂರ ಹಚ್ಚಿ ಎತ್ತುಗಳಿಗೆ ಶಕ್ತಿ ಕೊಡು ಎಂದು ಬೇಡಿಕೊಳ್ಳುತ್ತಾರೆ. ಆದ್ರೆ ಕೊರೊನಾ ಹಾವಳಿ ಹಿನ್ನೆಲೆ ಈ ಬಾರಿ ಬಸವಣ್ಣನ ಜಾತ್ರೆ ನಡೆಸುತ್ತಿಲ್ಲ. ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಕೈಗೊಂಡಿರುವ ಹಿನ್ನೆಲೆ ಜಾತ್ರಾ ಮಂಡಳಿ ಹಾಗೂ ಕಲ್ಲಾಪುರದ ಗ್ರಾಮಸ್ಥರು ಸಭೆಯಲ್ಲಿ ತೀರ್ಮಾನ ಮಾಡಿ ಜನರ ಆರೋಗ್ಯ ದೃಷ್ಟಿಯಿಂದ ಜಾತ್ರೆಯನ್ನು ರದ್ದು ಮಾಡಿದ್ದಾರೆ.