ಕರ್ನಾಟಕ

karnataka

ETV Bharat / state

ಎಸ್ಎಸ್ಎಲ್​​ಸಿ ಗಣಿತ ಪರೀಕ್ಷೆಯಲ್ಲಿ‌ ನಕಲು: ಗದಗದಲ್ಲಿ 6 ವಿದ್ಯಾರ್ಥಿಗಳು ಡಿಬಾರ್​

ಗದಗದಲ್ಲಿ ಎಸ್ಎಸ್ಎಲ್​​ಸಿ ಗಣಿತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಒಟ್ಟು ಆರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

Gadaga
Gadaga

By

Published : Jun 27, 2020, 4:28 PM IST

ಗದಗ:ಇಂದು ಎಸ್ಎಸ್ಎಲ್​ಸಿ ಗಣಿತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಒಟ್ಟು ಆರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

ನಗರದ ಬಾಷಲ್ ‌ಮಿಷನ್ ಪರೀಕ್ಷಾ ಕೇಂದ್ರದಲ್ಲಿ ಎಸ್ಎಸ್ಎಲ್​​ಸಿ ಗಣಿತ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಧಾರವಾಡ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ದಿಢೀರ್ ಭೇಟಿ ನೀಡಿದ್ದು, ಮೂವರು ವಿದ್ಯಾರ್ಥಿಗಳು ನಕಲು ಮಾಡುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ಮೂವರನ್ನು ಡಿಬಾರ್ ಮಾಡಿ ಆದೇಶ ಹೊರಡಿಸಿದ್ದಾರೆ.

ಎಸ್ಎಸ್ಎಲ್ ಸಿ ಗಣಿತ ಪರೀಕ್ಷೆಯಲ್ಲಿ ನಕಲು: ಮೂವರು ವಿದ್ಯಾರ್ಥಿಗಳು ಡಿಬಾರ್

ಮೂವರು ವಿದ್ಯಾರ್ಥಿಗಳು ಡಿಬಾರ್:

ನಗರದ ಗಾಂಧಿ ಸರ್ಕಲ್ ಬಳಿ ಇರುವ ಮುನ್ಸಿಪಲ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಕೂಡಾ ಮೂವರು ವಿದ್ಯಾರ್ಥಿಗಳನ್ನು ಆಯುಕ್ತರು ಡಿಬಾರ್ ಮಾಡಿದ್ದರು. ಈ ಮೂಲಕ‌ ಇಂದು ಒಂದೇ ದಿನ ಒಟ್ಟು 6 ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ.

ABOUT THE AUTHOR

...view details