ಕರ್ನಾಟಕ

karnataka

ETV Bharat / state

ಗದಗ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ: ನಡುಗಡ್ಡೆಯಾದ ಸರ್ಕಾರಿ ಆಸ್ಪತ್ರೆ - ಸರ್ಕಾರಿ ಆಸ್ಪತ್ರೆ ಮುಳುಗಡೆ

ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆ ನಡುಗಡ್ಡೆಯಾಗಿ ಮಾರ್ಪಟ್ಟಿದೆ.

ಮುಂದುವರೆದ ವರುಣನ ಆರ್ಭಟ: ನಡು ನೀರಲ್ಲಿ ಮುಂಡರಗಿ ಆಸ್ಪತ್ರೆ

By

Published : Oct 22, 2019, 11:00 AM IST

ಗದಗ: ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯೇ ನಡುಗಡ್ಡೆಯಂತಾಗಿದೆ.

ಮುಂದುವರೆದ ವರುಣನ ಆರ್ಭಟ: ನಡು ನೀರಲ್ಲಿ ಮುಂಡರಗಿ ಆಸ್ಪತ್ರೆ

ನಿನ್ನೆ ರಾತ್ರಿಯಿಡಿ ಧಾರಾಕಾರ‌ವಾಗಿ ಸುರಿದ ಮಳೆಗೆ ಸರ್ಕಾರಿ ಆಸ್ಪತ್ರೆ ನೀರಿನಲ್ಲಿ ಮುಳುಗಿಗಿದೆ. ಅಲ್ಲದೇ ಗ್ರಾಮದ ಹಲವಾರು ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಗ್ರಾಮಸ್ಥರು ಪರದಾಡ್ತಿದ್ದಾರೆ. ಮನೆ ಹಾಗೂ ಅಂಗಡಿಗಳಿಗೆ ನುಗ್ಗಿರೋ ನೀರನ್ನು ವಿದ್ಯುತ್​ ಮೋಟಾರ್ ಸಹಾಯದಿಂದ ಹೊರ ಹಾಕ್ತಿದ್ದಾರೆ. ನೀರಿನಿಂದ ನೆನೆದು ಹಲವು‌ ಮನೆಗಳು ಕುಸಿದಿವೆ. ಇನ್ನು ಮಳೆ ನೀರಿನಿಂದ ಹಲವು ರೋಗಗಳಿಗೆ ತುತ್ತಾಗಿರೋ ಗ್ರಾಮಸ್ಥರು ಆಸ್ಪತ್ರೆಗೆ ಹೋಗಬೇಕಂದ್ರೆ ದಾರಿಯೇ ಇಲ್ಲದಂತಾಗಿದೆ.

ಪ್ರವಾಹಕ್ಕೆ ಸಿಲುಕಿದ ಅಂಧ ಮಕ್ಕಳ ಶಾಲೆ, ರೈಲ್ವೆ ನಿಲ್ದಾಣವೇ ಆಶ್ರಯ ಕೇಂದ್ರ: ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವಾರು‌ ಗ್ರಾಮಗಳ ಜನರ ಮುಳುಗಡೆ ಭೀತಿಯಲ್ಲಿದ್ದಾರೆ. ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರ ಬದುಕು ಬೀದಿ ಪಾಲಾಗಿದೆ. ರಾತ್ರಿಯಿಡಿ ನಿರಂತರ ಮಳೆ ಸುರಿದ ಪರಿಣಾಮ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪ್ರವಾಹ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮತ್ತೊಂದೆಡೆ ಹೊಳೆಮಣ್ಣೂರ ಗ್ರಾಮಸ್ಥರು ಪ್ರವಾಹದ ಆತಂಕಕ್ಕೆ ತಮ್ಮ ಎತ್ತಿನ ಬಂಡಿ ಮೂಲಕ ಜಾನುವಾರು ಸಮೇತ ಊರು ಬಿಡ್ತಿದ್ದಾರೆ.

ಪ್ರವಾಹಕ್ಕೆ ಅಂದ ಮಕ್ಕಳ ಶಾಲೆ ನಡು ನೀರಲ್ಲಿ
ಪ್ರವಾಹಕ್ಕೆ ಅಂದ ಮಕ್ಕಳ ಶಾಲೆ ನಡು ನೀರಲ್ಲಿ

ಗ್ರಾಮದ‌ ಭಾಗಶಃ ಮನೆಗಳಿಗೆ ನೀರು ನುಗ್ಗಿರೋ ಪರಿಣಾಮ ಗ್ರಾಮಸ್ಥರೆಲ್ಲರೂ ತಮ್ಮ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಹೊಳೆ ಆಲೂರಿನ ಜ್ಞಾನಸಿಂಧು ಅಂಧಮಕ್ಕಳ ವಸತಿ ಶಾಲೆಗೂ ಸಹ ನೀರು ನುಗ್ಗಿದ್ದು, ಇದೀಗ 3ನೇ ಬಾರಿಗೆ ಈ ಶಾಲೆ ಪ್ರವಾಹಕ್ಕೆ ತುತ್ತಾಗಿದೆ. 82 ಅಂಧ ಮಕ್ಕಳಿಗೆ ಆಶ್ರಯವಾಗಿರೋ ಈ ಶಾಲೆಯನ್ನ ಸ್ಥಳಾಂತರ ಮಾಡುವಂತೆ ಈ ಹಿಂದೆಯೇ ಜಿಲ್ಲಾಡಳಿತ ಆದೇಶ ಮಾಡಿತ್ತು. ಆದರೆ ಇದೀಗ ದೀಪಾವಳಿ ನಿಮಿತ್ತ ವಸತಿ ಶಾಲೆ ಅಂಧ ಮಕ್ಕಳು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ‌ಜೊತೆಗೆ ಗ್ರಾಮದ ಎಚ್ಚರೇಶ್ವರ ಪ್ರೌಢಶಾಲೆಯೂ ಸಹ ಪ್ರವಾಹದಲ್ಲಿ ಮುಳುಗಡೆಯಾಗಿದೆ. ಶಾಲೆ ಪ್ರಾರಂಭದ ದಿನವೇ ಪ್ರವಾಹ ಬಂದಿದ್ದು, ಶಾಲಾ ಮಕ್ಕಳಲ್ಲಿ ಪುನಃ ಆತಂಕ ಸೃಷ್ಟಿಯಾಗಿದೆ. ಹೊಳೆ ಆಲೂರಿನ ರೈಲ್ವೆ ನಿಲ್ದಾಣವು ನಿರಾಶ್ರಿತರ ಆಶ್ರಯ ಕೇಂದ್ರವಾಗಿ ಮಾರ್ಪಟ್ಟಿದೆ.

ABOUT THE AUTHOR

...view details