ಗದಗ:ಕೊರೊನಾ ಸೋಂಕಿತ ವೈದ್ಯರೊಬ್ಬರು ಸೋಂಕು ದೃಢಪಟ್ಟ ಎರಡೇ ದಿನಕ್ಕೆ ಮನೆ ಸೇರಿದ್ದು, ಗದಗನ ಪಂಚಾಕ್ಷರಿ ನಗರದ ನಿಷೇಧಿತ ಪ್ರದೇಶದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ದೃಢಪಟ್ಟು ಎರಡೇ ದಿನಕ್ಕೆ ಮನೆ ಸೇರಿದ ವೈದ್ಯ: ಸ್ಥಳೀಯರ ಆರೋಪ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ
ಕೊರೊನಾ ಸೋಂಕಿತ ವೈದ್ಯರೊಬ್ಬರು ಸೋಂಕು ದೃಢಪಟ್ಟ ಎರಡೇ ದಿನಕ್ಕೆ ಮನೆ ಸೇರಿದ್ದು, ಇದರಿಂದಾಗಿ ಸ್ಥಳೀಯರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೂನ್ 6ರಂದು ಗದಗ ಜಿಮ್ಸ್ ವೈದ್ಯ (ಪಿ -5014)ಗೆ ಸೋಂಕು ದೃಢಪಟ್ಟಿತ್ತು. ಸೋಂಕಿತ ವೈದ್ಯ ಪಂಚಾಕ್ಷರಿ ನಗರದವರಾಗಿದ್ದರಿಂದ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಆದರೆ ಸೋಂಕು ಕಾಣಿಸಿಕೊಂಡ ವ್ಯಕ್ತಿ ಎರಡೇ ದಿನಕ್ಕೆ ರಾತ್ರಿ ಮನೆ ಸೇರಿದ್ದಾರೆ. ಕುಟುಂಬದವರ ಜೊತೆ ಓಡಾಡ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮನೆಗೆ ಯಾಕೆ ಬಂದ್ರಿ ಎಂದು ಸ್ಥಳೀಯರು ಕೇಳಿದ್ರೆ, ನೆಗೆಟಿವ್ ಇದೆ, ಪಾಸಿಟಿವ್ ಇಲ್ಲ ಎಂದು ಕುಟುಂಬಸ್ಥರು ವಾಗ್ವಾದ ಮಾಡ್ತಿದ್ದಾರಂತೆ. ಪಾಸಿಟಿವ್ ಇಲ್ಲವೆಂದ್ರೆ ಕಂಟೈನ್ಮೆಂಟ್ ಯಾಕೆ? ಎರಡೇ ದಿನಕ್ಕೆ ಹೇಗೆ ಬಿಟ್ರಿ? ಕೊನೇ ಪಕ್ಷ 7 ದಿನ ಸಾಂಸ್ಥಿಕ ಕ್ವಾರಂಟೈನ್ ಯಾಕೆ ಮಾಡಲಿಲ್ಲ? ಪ್ರಭಾವಿಗಳಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯವೇ ಎಂದು ಸ್ಥಳೀಯರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.