ಕರ್ನಾಟಕ

karnataka

ETV Bharat / state

ಗದಗ ಕಂಟೈನ್ಮೆಂಟ್ ಏರಿಯಾದ ಗೋಳಾಟ.. ಆಳೋರು,ಅಧಿಕಾರಿಗಳ ವಿರುದ್ಧ ಕೆಂಡಕಾರಿದ ಜನ.. - gadaga contaiment area

5 ದಿನದಿಂದ ಮನೆಯ ಒಳಗೆ ಇದ್ದ ಮಹಿಳೆಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್, ಡಿಸಿ ಎಂ ಜಿ ಹಿರೇಮಠ ಉಚಿತ ದಿನಸಿ, ಹಾಲು, ತರಕಾರಿ ನೀಡುವ ಭರವಸೆ ನೀಡಿದ್ರು. ಆದರೆ, ಐದು ದಿನಗಳಿಂದ ಏನೂ‌ ಇಲ್ಲದೇ ಪರದಾಡುತ್ತಿದ್ದೇವೆ ಎಂದು ಜನ ಗೋಳಾಡ್ತಿದ್ದಾರೆ‌.

containment area peoples angry
ಕಂಟೈನ್ಮೆಂಟ್ ಏರಿಯಾ ಜನರ ಗೋಳಾಟ :

By

Published : Apr 11, 2020, 12:59 PM IST

ಗದಗ: ಲಾಕ್‌ಡೌನ್ ಹಿನ್ನೆಲೆ ನಗರದ ರಂಗನವಾಡ ಗಲ್ಲಿಯ ಜನರು ಅನ್ನ, ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ಮಕ್ಕಳು ಬೀದಿಗಿಳಿದು ಜಿಲ್ಲಾಡಳಿತದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಕೊರೊನಾ ವೈರಸ್‌ನಿಂದ ವೃದ್ಧೆ ಸಾವನ್ನಪ್ಪಿದ ಪ್ರದೇಶ ರಂಗನವಾಡ ಗಲ್ಲಿಯನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. 5 ದಿನಗಳಿಂದ ಮನೆ ಬಿಟ್ಟು ಹೊರ ಬರದೆ ಜನ ಲಾಕ್​ಡೌನ್‌ಗೆ ಸಹಕಾರ ಕೊಡ್ತಿದ್ದಾರೆ. ಆದರೆ, ತರಕಾರಿ, ದಿನಸಿ ವಸ್ತುಗಳಿಗೆ ಜನ ಪರದಾಟ ನಡೆಸುತ್ತಿದ್ದಾರೆ.

ಕಂಟೈನ್ಮೆಂಟ್ ಏರಿಯಾ ಜನರ ಗೋಳಾಟ..

5ದಿನದಿಂದ ಮನೆಯ ಒಳಗೆ ಇದ್ದ ಮಹಿಳೆಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್, ಡಿಸಿ ಎಂ ಜಿ ಹಿರೇಮಠ ಉಚಿತ ದಿನಸಿ, ಹಾಲು, ತರಕಾರಿ ನೀಡುವ ಭರವಸೆ ನೀಡಿದ್ರು. ಆದರೆ, ಐದು ದಿನಗಳಿಂದ ಏನೂ‌ ಇಲ್ಲದೇ ಪರದಾಡುತ್ತಿದ್ದೇವೆ ಎಂದು ಜನ ಗೋಳಾಡ್ತಿದ್ದಾರೆ‌.

ಶೌಚಕ್ಕೂ ಸಹ ಪೊಲೀಸರು ಹೊರಗೆ ಬಿಡುತ್ತಿಲ್ಲ. ನಿಷೇಧಿತ ಪ್ರದೇಶವೆಂದು ಹೊರಗೂ ಕಳುಹಿಸುತ್ತಿಲ್ಲ. ನಮಗೆ ಅಗತ್ಯ ವಸ್ತುಗಳನ್ನೂ ಕೂಡ ತಲುಪಿಸುತ್ತಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details