ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ಗೆ ಬರಗಾಲದ ಜೊತೆ ಸಂಬಂಧವಿದ್ರೆ, ಬಿಜೆಪಿಗೆ ಪ್ರವಾಹದ ಜೊತೆ ಸಂಬಂಧವಿದೆ: ಸಿಸಿ ಪಾಟೀಲ - Congress Guarantee schemes

ಕಾಂಗ್ರೆಸ್​ ಪಕ್ಷಕ್ಕೆ ಬರಗಾಲದ ಜೊತೆ ಸಂಬಂಧವಿದ್ದರೆ, ಬಿಜೆಪಿಗೆ ಪ್ರವಾಹದ ಜೊತೆ ಸಂಬಂಧವಿದೆ ಎಂದು ಮಾಜಿ ಸಚಿವ ಸಿಸಿ ಪಾಟೀಲ ಹಾಸ್ಯಾಸ್ಪದವಾಗಿ ಹೇಳಿದರು.

cc patil
ಸಿಸಿ ಪಾಟೀಲ

By

Published : Jun 30, 2023, 10:09 AM IST

Updated : Jun 30, 2023, 12:51 PM IST

ಮಾಜಿ ಸಚಿವ ಸಿಸಿ ಪಾಟೀಲ ಸುದ್ದಿಗೋಷ್ಠಿ

ಗದಗ : ಈವರೆಗೂ ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಮುಂದಿನ ಐದು ವರ್ಷಗಳ ಕಾಲ ಕರ್ನಾಟಕದಲ್ಲಿ ಬರಗಾಲವೆಂದು ವರದಿಯಾಗುತ್ತಿದೆ. ಇದನ್ನು ನೋಡಿದರೆ ಕಾಂಗ್ರೆಸ್​ ಪಕ್ಷಕ್ಕೂ ಈ ಬರಗಾಲಕ್ಕೂ ಅವಿನಾಭಾವ ಸಂಬಂಧವಿದೆ. ಹಾಗೆಯೇ, ನಮಗೂ (ಬಿಜೆಪಿ) ಪ್ರವಾಹಕ್ಕೂ ಸಂಬಂಧವಿದೆ ಅಂತ ಅನ್ನಿಸುತ್ತದೆ ಎಂದು ಮಾಜಿ ಸಚಿವ ಸಿಸಿ ಪಾಟೀಲ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬರಗಾಲ ಬಿದ್ದರೆ 5 ವರ್ಷ ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಕ್ಕಿ ನೀಡಬೇಕು. ಕಾಂಗ್ರೆಸ್​ ಪಕ್ಷದ ಘೋಷಣೆ ಈಡೇರಿಸಲು ಸ್ಟಾಕ್​ ಇಟ್ಟಿಲ್ಲ. ಕರ್ನಾಟಕ ಅಷ್ಟೇ ಅಲ್ಲದೆ, ಬೇರೆ ಯಾವುದೇ ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ. ಪ್ರಕೃತಿ ವಿಕೋಪ, ಯುದ್ಧ, ಪ್ರವಾಹದಂತಹ ಸಮಯದಲ್ಲಿ ಉಪಯೋಗಿಸಲು ಮೀಸಲಿಟ್ಟಿದೆ ಎಂದರು.

10 ಕೆಜಿ ಅಕ್ಕಿ ವಿತರಿಸುವ ಘೋಷಣೆಗೂ ಮುನ್ನ ಅಕ್ಕಿಯನ್ನು ಎಲ್ಲಿ ಖರೀದಿಸಬೇಕು ಎಂಬ ಆಲೋಚನೆಯೂ ಇಲ್ಲದೆ ಘೋಷಣೆ ಮಾಡಿದ್ದು ಹಾಸ್ಯಾಸ್ಪದ. ಈಗ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್​ ನಾಯಕರು ಆರೋಪ ಹೊರಿಸುತ್ತಿದ್ದಾರೆ. ಸಿದ್ದರಾಮಯ್ಯನವರು 10 ಕೆ.ಜಿ ಅಕ್ಕಿ ಕೋಡುತ್ತೇನೆ ಅಂತಾ ಹೇಳಿದ್ರು. ವಿಧಾನಸೌಧದ ಮೂರನೇಯ ಮಹಡಿ ಕುರ್ಚಿ ಮೇಲೆ ಕಣ್ಣಿಟ್ಟು, ಏನು ಬೇಕೋ ಅದನ್ನೆಲ್ಲವನ್ನು ಘೋಷಣೆ ಮಾಡಿದ್ರು. ಈಗ ವಿನಾ ಕಾರಣ ಪ್ರಧಾನಿ ನರೇಂದ್ರ ಮೋದಿ ಕಡೆ ಬೊಟ್ಟು ಮಾಡುತ್ತಿದ್ದಾರೆ. ಗ್ಯಾರಂಟಿ ಘೋಷಣೆ ಮಾಡುವಾಗ ಕೇಂದ್ರಕ್ಕೆ ಅಕ್ಕಿ ಬೇಕು ಅಂತಾ ಕೇಳಿದ್ರಾ? ಎಂದು ಪ್ರಶ್ನೆ ಮಾಡಿದರು.

ಈಗ ನೀಡ್ತಾಯಿರೋ ಅಕ್ಕಿ ನರೇಂದ್ರ ‌ಮೋದಿ ಸರ್ಕಾರದ್ದು. ಐದು ಕೆಜಿ ಅಕ್ಕಿ ಬದಲಾಗಿ, ಒಬ್ಬರಿಗೆ 175 ರೂಪಾಯಿ ಅಂತಾ ಈಗ ಹೇಳ್ತಿದ್ದಾರೆ. ಆ 5 ಕೆ.ಜಿ ಅಕ್ಕಿಯನ್ನು ನರೇಂದ್ರ ‌ಮೋದಿ ಸರ್ಕಾರ ನೀಡ್ತಾಯಿದೆ. ಬದ್ಧತೆ ಇರೋ ನಾಯಕ ಸಿಎಂ ಸಿದ್ದರಾಮಯ್ಯನವರು ಇದನ್ನು ಮರೆಯಬಾರದು. ನೀವು ಈಗ ನೀಡಲು ಮುಂದಾಗಿರೋ 175 ರೂ. ಜೊತೆಗೆ ಇನ್ನೂ 175 ರೂಪಾಯಿ ಹಣ ಹಾಕ್ಬೇಕು. ಅಕ್ಕಿಗೆ ಇರೋ ಮಾರುಕಟ್ಟೆ ಬೆಲೆಯ ರೀತಿ ಹಣ ಹಾಕ್ಬೇಕು. ನೀವು ಕೋಡ್ತಾಯಿರೋ ಹಣದಿಂದ ಮಾರುಕಟ್ಟೆಯಲ್ಲಿ 3 ಕೆ.ಜಿ ಅಕ್ಕಿ ಸಿಗೋದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ ಆಗುತ್ತದೆ ಅಂತ ಸ್ವತಃ ಸಚಿವ ಹೆಚ್ ಕೆ ಪಾಟೀಲ್ ಅವರೇ ಹೇಳ್ತಾರೆ. ಘೋಷಣೆ ಮಾಡುವಾಗ ಗೊತ್ತಾಗಲ್ಲಿಲ್ವಾ?, ಹೇಳಿದಂತೆ ಇನ್ನೂ ಹೆಚ್ಚುವರಿ ಐದು ಕೆಜಿ ಅಕ್ಕಿ ಹಣವನ್ನು ನೀಡ್ಬೇಕು. ಐದು ಕೆಜಿ ನಮ್ಮದು, ನಿಮ್ಮ ಲೆಕ್ಕದ ಪ್ರಕಾರ 10 ಕೆಜಿ ಬದಲಾಗಿ 3 ಕೆಜಿ ಅಕ್ಕಿ ಕೊಡ್ತಾಯಿದ್ದೀರಿ. ಅಕ್ಕಿ ಬದಲಾಗಿ ಹಣ ಕೊಡುವುದಾದರೇ 10 ಕೆಜಿ ಅಕ್ಕಿಯ ಸಂಪೂರ್ಣ ಹಣವನ್ನು ಫಲಾನುಭವಿ ಖಾತೆಗೆ ಜಮೆ ಮಾಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ :ಲಿಂಗಾಯತ ಡ್ಯಾಂ ಒಡೆಯಲು ಹತ್ತು ಜನ ಡಿಕೆ ಶಿವಕುಮಾರ್ ಬಂದರೂ ಸಾಧ್ಯವಿಲ್ಲ: ಸಿ.ಸಿ. ಪಾಟೀಲ

ಹಣಕಾಸಿನ ಹೊರೆಯ ಕಲ್ಪನೆಯಿಲ್ಲದೆ ಚುನಾವಣೆ ಪ್ರಣಾಳಿಕೆಯಲ್ಲಿ ಮಾಡಿದ ಘೋಷಣೆಗಳನ್ನು ಯಾವ ರೀತಿಯಲ್ಲಿ ಈಡೇರಿಸಲು ಸಾಧ್ಯವಾಗುತ್ತದೆ ಎಂಬುದರ ಕುರಿತು ಕಾಂಗ್ರೆಸ್​ ನಾಯಕರಲ್ಲೇ ಗೊಂದಲ ಏರ್ಪಟ್ಟಿದೆ. ಅಧಿಕಾರಕ್ಕೆ ಬಂದ ನಂತರ ಘೋಷಣೆಗಳ ಈಡೇರಿಕೆಗೆ ಬೇಕಾದ ಸಂಪನ್ಮೂಲಗಳ ಅರಿವು ಕಾಂಗ್ರೆಸ್​ ನಾಯಕರಿಗೆ ಇಲ್ಲದಾಗಿದೆ. ಕಾಂಗ್ರೆಸ್ಸಿಗರಿಗೆ ಚುನಾವಣೆ ತಂತ್ರಗಾರಿಕೆ ಹೇಳಿಕೊಟ್ಟವರ್ಯಾರು? ಎಂದು ವ್ಯಂಗ್ಯವಾಡಿದರು.

ಉಚಿತ ಪ್ರಯಾಣದ ಹೊರೆಯನ್ನು ರಾಜ್ಯ ಸರ್ಕಾರ ಭರಿಸಬೇಕು.​ ವಿದ್ಯಾರ್ಥಿಗಳಿಗೆ ಹಾಗೂ ಇತರೆ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ. ಕಂಡಿಷನ್​ ಹಾಕದೆ ರಾಜ್ಯದ ಪ್ರತಿಯೊಬ್ಬರಿಗೂ 200 ಯುನಿಟ್​ ವಿದ್ಯುತ್​ ಉಚಿತ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್,​ ಈಗ ಷರತ್ತು​ ಹಾಕುವ ಮೂಲಕ 200 ಯುನಿಟ್​ ಉಚಿತ ವಿದ್ಯುತ್​ ವಿತರಣೆಗೆ ಕ್ರಮ ಜರುಗಿಸುತ್ತಿದೆ ಎಂದು ಕೈ ವಿರುದ್ಧ ಕೆಂಡಕಾರಿದರು.

ಇದನ್ನೂ ಓದಿ :ಅಕ್ಕಿ ಲಭ್ಯವಾಗುವವರೆಗೆ ಫಲಾನುಭವಿಗಳ ಖಾತೆಗೆ ಹಣ; ಜುಲೈ 1ರಿಂದ 10 ಕೆಜಿ ಧಾನ್ಯ ವಿತರಣೆ- ಸಿಎಂ ಸಿದ್ದರಾಮಯ್ಯ

Last Updated : Jun 30, 2023, 12:51 PM IST

ABOUT THE AUTHOR

...view details